
ಕನ್ನಡಿ ನಂಟು
ಮಾಳಿಗೆ ಮನೆ
ಮನೆಯೊಳಗಣ ಕತ್ತಲಿಗೆ
ಬಯಲೊಳಗೊಂದು ಕನ್ನಡಿ
ಕಿಲಾಡಿ ಬೆಳಕು
ಕಿಂಡಿಯಲಿ ಹರಿದು
ಒಳಗು
ಎಲ್ಲಾ ಬೆಳಗು
ಕಟ್ಟೆಯಲಿ ಕುಳಿತು
ಅಜ್ಜಾ ಮೊಮ್ಮಗನ ಈ
ಕನ್ನಡೀ ಕಿಲಾ
ಡೀ
ಆಟಾ ಕಂಡು ಮುಸಿ ಮುಸಿ
ನಗುತಾ ಅಜ್ಜಿ…
ಅಜ್ಜಾ
ಬದುಕೆಲ್ಲಾ ಮಾಳಿಗೆ ಮನೆ
ಕತ್ತಲೂ ಕಳೆದು
ಈಗ
ಬೆಳಕು ನಗು ನಗು
ಕತ್ತಲೇ ಹಿತ
ಬೆಳಕಲಿ ಮಿನುಗುವ ಆಸೆ
ಮರೆ…ಯೇ..
ಬೆಳಕು
ಹಿಡಿಯಲಾದೀತೇ ನಿನ್ನ
ಹಾಗೆ
ಕನ್ನಡಿಯನಿಟ್ಟು ಕಂಡಿರುವೆ
ಕಿಂಡಿ
ಯ ಬೆಳಕು ಆಗ
ಈಗ
ಕನ್ನಡಿ ನಂಟು.
Comments 1
Mahendra Gowdar
Oct 15, 2023ತೂತು ಕಿಂಡಿ ಸಾಕು ಬೆಳಕು ಒಳನುಗ್ಗಲು…! ಸರ್ ಸೂಪರ್ ಅನಾಲಜಿ!!!