ಆ ದಾರಿಯೇನು ಕುರುಡೇ…
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ
ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ
ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ
ಈ ಹುಣುಸೇ ಮರದ ಹುಳಿಗೇನು ಮುಪ್ಪೇ
ಕನ್ಯೆಯ ಬೆನ್ನ ಬೆವರ ಉಪ್ಪು ಸವರುತಿದೆ
ಧ್ಯಾನದೊಳಗ ಕಿವಿಯಲಿ ಚಪ್ಪಾಳೆ ಸದ್ದು
ಮೋಡದ ಮರೆಯಲಿ ಚಂದಿರ ಮೌನ
ಕಣ್ಣಲಿ ಬೆರಳ ಇಟ್ಟು ತೋರಿಸಲಾರೆ
ತೋರುವ ಬೆರಳ ಕಣ್ಣ ಇಟ್ಟು ಕಾಣಲಾರೆ
ತೋರುವ ಕಣ್ಣಲಿ ಕಣ್ಣಿಡೆ
ಆ ದಾರಿಯೇನು ಕುರುಡೇ…
Comments 1
Harsha m patil
Jun 7, 2021Title is fantastic sir