Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶೂನ್ಯ ತುಂಬಿಕೊಂಡ ಬಿಂದಿಗೆ
Share:
Poems September 6, 2026 ಜಬೀವುಲ್ಲಾ ಎಂ.ಅಸದ್

ಶೂನ್ಯ ತುಂಬಿಕೊಂಡ ಬಿಂದಿಗೆ

ಝೆನ್ ಹೇಳುತ್ತದೆ, ಹೀಗೆ…

ನನಗೆ ಎಲ್ಲಾ ಗೊತ್ತಿದೆ ಎಂದರೆ
ನಿನಗೆ ಏನೂ ಗೊತ್ತಿಲ್ಲ ಎಂದರ್ಥ

ನನಗೇನೂ ಗೊತ್ತಿಲ್ಲ ಎಂದರೆ
ಆಗಲೂ…
ನಿನಗೆ ಏನೂ ಗೊತ್ತಿಲ್ಲವೆಂದೇ ಅರ್ಥ

ಗೊತ್ತಿಲ್ಲದ್ದನ್ನು
ಗೊತ್ತುಮಾಡಿಕೊಳ್ಳಲು
ಅಲೆಮಾರಿಯಾಗುತ್ತದೆ ಮನಸ್ಸು

ಎಲ್ಲವೂ ಅರಿವಿಗೆ ಬಂದಾಗ
ಏನೂ ಉಳಿಯುವುದಿಲ್ಲ ಆಗ
ಖಾಲಿತನದ ಹೊರತು

ಶೂನ್ಯ ತುಂಬಿದ ಬಿಂದಿಗೆಯಲ್ಲಿ
ಚಂದಿರನ ಬಿಂಬ ಇಣುಕುವುದಿಲ್ಲ, ಇಲ್ಲ

ಶೂನ್ಯ ತುಂಬಿಕೊಂಡಿರುವ ಬಿಂದಿಗೆ
ಎಂದಿಗೂ ಖಾಲಿಯಲ್ಲ, ಅಲ್ಲ

ಖಯಾಲಿಯ ಹೊರತಾಗಿ ಇಲ್ಲಿ
ತುಂಬಿಕೊಳ್ಳಲು ಏನೂ ಇಲ್ಲ

ಸುರಿಯಬೇಕು ಮೊದಲು
ತುಂಬಿಕೊಂಡ ಎಲ್ಲವನು
‘ನಾನು’ ಎಂಬ ನನ್ನನು.

Previous post ಬಿಸಿಲಿಗೆ ಗಡಿಗಳುಂಟೆ?…
ಬಿಸಿಲಿಗೆ ಗಡಿಗಳುಂಟೆ?…
Next post ಅನಿಶಾ…
ಅನಿಶಾ…

Related Posts

ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...
ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ನನ್ನೆದುರು ನಾ…
ನನ್ನೆದುರು ನಾ…
March 6, 2024
ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2
May 8, 2024
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಗಣಾಚಾರ
ಗಣಾಚಾರ
August 8, 2021
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಅಂದು-ಇಂದು
ಅಂದು-ಇಂದು
December 8, 2021
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
Copyright © 2026 Bayalu