Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಡ ಸೋಂಕದ ಅಲೆಗಳು
Share:
Poems July 10, 2025 ಜ್ಯೋತಿಲಿಂಗಪ್ಪ

ದಡ ಸೋಂಕದ ಅಲೆಗಳು

ನದಿ ಕೂಡುವ ಕಡಲ ಅಂಚು
ನಿಂತು ಸಂಬಂಧ ಹುಡುಕುತಿರುವೆ

ಕಡಲ ಸೇರುವ ನೀರು
ನದಿ ಯಾವುದು ಕಡಲು ಯಾವುದು
ಸಂಬಂಧ ಅಸಂಬಂಧ

ಎರಡೆಂಬ ಭಿನ್ನ ಅಳಿಯದೇ..

ದಾರಿ ತೋರುವ ಕೈಯ ಹಿಡಿದಿರುವೆ
ಕೈಯ ಕುರುಡು ತೋರದು ದಾರಿ

ನೀರಿರದ ದಾರಿ ನದಿ ಗುರುತು ಮೂಡಿಸಿದೆ
ನೀರಲಿ ನೀರಾಗಿಹ ನೀರು
ನೀರಾಗಿಸಿದೆ ಎನ್ನ

ಮರೆಯ ಆಚೆ ಮರೆಯಬಾರದ ಘನ

ಅರಿಯಲಿಲ್ಲ ಅರಿದಿಲ್ಲ
ಬಲ್ಲತನದ ಭಂಗ ಇನ್ನಿಲ್ಲ

ಅನನ್ಯ ಎಂಬುದೇನು…?
ಭ್ರಮೆ; ಹೇಳಬಾರದ ಶಬ್ದ ಸಂಭ್ರಮ

ಆಹಾ ಕಣ್ಣ ಸುಖವ ನೆಚ್ಚಿ
ಮಣ್ಣು ಮೆಟ್ಟಿದ ಪಾದ ಆಹಾ
ನೆಲ ಮುಟ್ಟದು ಕಣ್ಣು

ಊರು ಹಾಳಾಯಿತು;ಮದ ತಣ್ಣಗಾಯಿತು
ಹೊಗೆ ಇಲ್ಲದ ಬೆಂಕಿ ಸುಟ್ಟ ಊರು
ಕಣ್ಣಿಲ್ಲದವರ ಕಾಡಿತ್ತು

ಹರಿಯುವ ನದಿ ನೀರು
ನಾದವ ಏನೆಂದು ಬರೆಯಲಿ.

Previous post ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
Next post ಕಲಿಸು ಗುರುವೆ…
ಕಲಿಸು ಗುರುವೆ…

Related Posts

ಈ ಕನ್ನಡಿ
Share:
Poems

ಈ ಕನ್ನಡಿ

March 6, 2024 ಜ್ಯೋತಿಲಿಂಗಪ್ಪ
ಈಗೀಗ ಈ ಕನ್ನಡಿ ನನ್ನ ಮುದುಕನಾಗಿ ತೋರಿಸುತ್ತಿದೆ ಯುವಕನಾಗಿ ಕಾಣಿಸುತ್ತದೆ ನಾನೇನು…. ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ ಈ ಕನ್ನಡಿ...
ಮಾತು ಮಾಯೆ
Share:
Poems

ಮಾತು ಮಾಯೆ

July 4, 2021 ಕೆ.ಆರ್ ಮಂಗಳಾ
ಶಬ್ದಗಳ ಅರಣ್ಯದಲಿ ಕಳೆದು ಹೋಗಿದ್ದೀ ನಾನಿನ್ನು ಮಾತನಾಡಲಾರೆ ನಿನ್ನ ನೀನೇ ಹುಡುಕಿಕೋ- ಅಂದ ಗುರು ಹೀಗೊಂದು ದಿನ ಮೌನವಾಗಿಬಿಟ್ಟ! ಸುಳ್ಳಲ್ಲ ನಿಜ, ಅವರ ಒಂದೊಂದು ನುಡಿಗಳೂ...

Comments 3

  1. ಷಡಕ್ಷರಿ ಎಸ್
    Jul 22, 2025 Reply

    ದಡ ಮುಟ್ಟದ ಅಲೆಗಳ ಗುರಿ ಯಾವುದು? ಗಮ್ಯವಿಲ್ಲದ ಜೀವನವನ್ನು ಒಗಟಾಗಿ ಬೆಡಗಿನ ನುಡಿಯಲ್ಲಿ ಕಟ್ಟಿದ ಕವನ ಚೆನ್ನಾಗಿದೆ👌👌👌

  2. ಶಿವಪುತ್ರ ಕಲ್ಲಹಳ್ಳಿ
    Jul 31, 2025 Reply

    ದಾರಿ ತೋರುವ ಕೈಗೆ ಕುರುಡಾದರೆ ಏನು ಗತಿ?

  3. ಬಸವಪ್ರಭು ಹತ್ತಿಕಟ್ಟಿ
    Aug 2, 2025 Reply

    ದಾರಿ ತೋರುವ ಕೈಯ ಹಿಡಿದಿರುವೆ
    ಕೈಯ ಕುರುಡು ತೋರದು ದಾರಿ- ದಿಕ್ಕು ತಪ್ಪಿದ ನಮ್ಮ ಬದುಕಿನ ಕಾರಣ 😒

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
ಶಿವನ ಕುದುರೆ…
ಶಿವನ ಕುದುರೆ…
May 1, 2019
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಮಾತು ಮಾಯೆ
ಮಾತು ಮಾಯೆ
July 4, 2021
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
Copyright © 2026 Bayalu