Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನುವಿನ ಉಪಟಳ
Share:
Poems December 13, 2024 ಕೆ.ಆರ್ ಮಂಗಳಾ

ನಾನುವಿನ ಉಪಟಳ

ಕಣ್ಣಪಾಪೆಯಲಿ ನಾನವಿತು
ಕುಳಿತಿರಲು
ಕಾಣುವ ನೋಟಗಳಿಗೆ
ಲೆಕ್ಕ ಹಾಕುವರಾರು?

ತಲೆಯೊಳಗೆ ನಾನೆಂಬುದು
ತತ್ತಿ ಇಟ್ಟಿರುವಾಗ
ಬರುವ ಯೋಚನೆಗಳನು
ಎಣಿಸಿದವರಾರು?

ಮನದ ಮೂಲೆಮೂಲೆಯಲು
ನಾನೇ ಮಲಗಿರುವಾಗ
ಜಗದ ಸೊಬಗಿಗೆ
ಜಾಗವೆಲ್ಲಿಹುದು?

ಮೌನದ ಬಲೆಯೊಳಗೂ
ಸ್ವಗತಗಳೇ ತುಂಬಿರಲು
ಖಾಲಿಯಾಗುವ ಗಳಿಗೆ
ಬರುವುದುಂಟೇನು?

ನಾಲಿಗೆಯ ತುಂಬೆಲ್ಲ
ರುಚಿಗಳೇ ಮೆತ್ತಿರಲು
ಸಹಜತೆಯ ಸವಿಯದಕೆ
ತಿಳಿದಿತೇನು?

ನೋಟ- ಕೂಟಗಳು
ಜೊತೆಯಾಗಿ ಎಳೆಯಲು
ಬಾಳ ಬಂಡಿಯು ತನ್ನ
ಗುರಿ ಸೇರುವುದೇನು?

ಕಾಗದದ ದೋಣಿಯನೇ
ನಾನೆಂದುಕೊಂಡಾಗ
ಭವದಲೆಯ ಹೊಡೆತವನು
ತಡೆಯಲಾದೀತೆ?
ತಾ ಬರಿಯ ಗಾಳಿಪಟ
ಸೂತ್ರ ಇನ್ನಾರೋ
ಎಂದುಕೊಂಡಂತೆ ಹಾರು ಹಕ್ಕಿ
ಅಹಮಿಕೆಯ ಅರಮನೆಯೇ
ನನ್ನದೆನುವಾಗ
ಇರುವಿಕೆಯ ಆಗಸಕೆ
ಹಾರಲಾದೀತೇ?

ತನ್ನದಲ್ಲದ ತನುವಿನಲಿ
ಕೋಟೆಯೊಳು ಕೋಟೆ ಕಟ್ಟಿ
ಕಾಮಿಸುತಾ ಕಲ್ಪಿಸುತಾ
ಒಡೆತನ ಸಾಧಿಸಿಹ
ಮನದ ಮುಖ ಕಳಚದೆ
ಅಹಮಿಕೆ ಕರಗದು
ಅಂತರಂಗ ಕಾಣದು
ನಾನು ಮರೆಯಾಗದು…

Previous post ನೀರು… ಬರಿ ನೀರೇ?
ನೀರು… ಬರಿ ನೀರೇ?
Next post ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…

Related Posts

ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
ಸನ್ಯಾಸ ದೀಕ್ಷೆ
Share:
Poems

ಸನ್ಯಾಸ ದೀಕ್ಷೆ

June 12, 2025 ಜಬೀವುಲ್ಲಾ ಎಂ.ಅಸದ್
ತುಂಬಿದ ಅಹಂ- ಸ್ವಾರ್ಥದ ಚೀಲವನು ಬಯಲಿಗೊಯ್ದು ಸುರಿದು ಸ್ವತಃ ಖಾಲಿಯಾಗಿ ಸಂಭ್ರಮಿಸುವುದು – ಸನ್ಯಾಸ ಒಂದೆಡೆ ನೆಲೆ ನಿಂತು ಮಹಾವೃಕ್ಷವಾಗಿ ಬೇರು ಬಿಟ್ಟು ಬಿಸಿಲು...

Comments 1

  1. Padmalaya
    Dec 13, 2024 Reply

    ಬಿಡಾಕಾಗದಿದ್ದರೆ ಪೂಜೆ ಮಾಡಬಹುದು…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
April 5, 2026
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ನೆಮ್ಮದಿ
ನೆಮ್ಮದಿ
April 6, 2020
WHO AM I?
WHO AM I?
June 17, 2020
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
Copyright © 2026 Bayalu