Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರವಲು ಮನೆ…
Share:
Poems August 10, 2023 ಕೆ.ಆರ್ ಮಂಗಳಾ

ಎರವಲು ಮನೆ…

ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ
ಉರಿದುರಿದು ಬೂದಿಯಾಗಿತ್ತು
ಪೇರಿಸಿ ಇಟ್ಟ ಸಿರಿ-ಸಂಪತ್ತು
ಆರಿಸ ಹೋದರೆ ಕೈ ಸುಟ್ಟಿತ್ತು
ಹಲುಬಿಹೆನೆಂದರೆ ದನಿ ಅಡಗಿತ್ತು
ಕೂಗಲು ಹೋದರೆ ಕಂಠ ಒಡೆದಿತ್ತು

ಹೊತ್ತಿ ಉರಿದಿತ್ತು ತಲೆ ಮೇಲಿನ ಸೂರು
ಕರಕಲಾದವು ಐದು ತೊಲೆಗಳು
ವಿಷಯಗಳಾಸರೆ ಕುಸಿಯತೊಡಗಿತ್ತು
ನಿಂತ ನೆಲವೇ ಜಾರುತಲಿತ್ತು
ಓಡಿಹೆನೆಂದರೆ ಬೀದಿಗಳಿಲ್ಲ
ಅವಿತುಕೊಳ್ಳಲು ಒಂದೂ ಗಲ್ಲಿಗಳಿಲ್ಲ

ಎತ್ತಲೋ ಓಡಿತು ಕಿಚ್ಚಿಗೆ ಅಂಜಿ
ದೂಳೆಬ್ಬಿಸಿ ಕಾಲ್ಕೆದರುತಲಿದ್ದ
ನನ್ನೊಳಗಿನ ಮದವೇರಿದ ಗೂಳಿ
ದೂಳುಕಟ್ಟಿದ ನೋಟಗಳಿಲ್ಲ
ಚಿತ್ತ ಭ್ರಾಂತಿಯ ರೂಪಗಳಿಲ್ಲ
ದಿಟ್ಟಿಸಲಿಕ್ಕೆ ಎದುರೆಂಬುದೇ ಇಲ್ಲ

ಭಸ್ಮವಾಗಲು ಮನೆ ಕಣ್ಣೆದುರಲ್ಲೇ
ಮೂಕವಾಯಿತು ಮನ ಒಳಗಲ್ಲೇ
ಕೂಡಿಹೆನೆಂದರೆ ಆತ್ಮ ಬೇರಿಲ್ಲ
ಹಿಡಿದಿಡಲು ದೇಹ ಉಳಿಯುವುದಿಲ್ಲ
ವೇದಿಕೆ ಏರಲು ವೇಷಗಳಿಲ್ಲ
ಬಣ್ಣ ಹಚ್ಚಲು ಮುಖವೇ ಇಲ್ಲ!

ಗುಪ್ತ ನಿಧಿಯ ಸಂಚಯ ಕೆಡಿಸಿ,
ತೋರುವ ಜಗದ ಸಂಚನು ತಿಳಿಸಿ
ನಂಬಿದ ಗುರುವೇ ಕಿಚ್ಚನ್ನಿಟ್ಟ
ಬಯಲ ಬಾಳಿಗೆ ಮುನ್ನುಡಿ ಬರೆದ
ಭಾವಗಳಿಲ್ಲ, ಜಾಲಗಳಿಲ್ಲ
ನೋಟಗಳಿಲ್ಲ, ಕೂಟಗಳಿಲ್ಲ…

ಎರವಲು ಮನೆಯ ಋಣ ಹರಿದಿತ್ತು
ಜಗದ ಜಗುಲಿಯಲಿ ಬೆಳಕೊಂದಿತ್ತು.

Previous post ಯಾಕೀ ಗೊಡವೆ?
ಯಾಕೀ ಗೊಡವೆ?
Next post ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ

Related Posts

ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...
ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...

Comments 1

  1. ಪೆರೂರು ಜಾರು, ಉಡುಪಿ
    Aug 16, 2023 Reply

    ಬಯಲು ಎರವಲೊಳಗೊ
    ಎರವಲು ಗುರುವೊಳಗೊ
    ಬಯಲು ಗುರುವೆರಡು ಎರವಲ
    ಬೂದಿ ಮುಚ್ಚಿದ ಕಿಚ್ಚಿನೊಳಗೊ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
WHO AM I?
WHO AM I?
June 17, 2020
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ವೀರ
ವೀರ
April 29, 2018
Copyright © 2025 Bayalu