Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭವ ರಾಟಾಳ
Share:
Poems September 10, 2022 ಕೆ.ಆರ್ ಮಂಗಳಾ

ಭವ ರಾಟಾಳ

ಇಗೋ ಹರಾಜಾಗುತ್ತಿದೆ ಈ ದೇಹ
ಪ್ರತಿ ದಿನ, ಪ್ರತಿ ಗಳಿಗೆ
ಕಾಣದ ಖದೀಮನ ಕೈಗೆ ಸಿಕ್ಕು

ತನ್ನದಲ್ಲದ ಕಾಯವನು
ಹರಾಜು ಹಾಕುತ್ತಲೇ ಇರುತ್ತಾನೆ
ಕ್ಷಣಾರ್ಧದ ಬಿಡುವೂ ಕೊಡದೆ

ಕೊಳ್ಳುವವರಿಗಿಲ್ಲಿ ಬರವಿಲ್ಲ
ಬಿಡ್ ಮಾಡುತ್ತಲೇ ಇರುತ್ತವೆ
ಲಕ್ಷೋಪಲಕ್ಷ ಭಾವಗಳು
ಕೊನೆಯಿಲ್ಲದ ಬೇಡಿಕೆಗಳು
ತಬ್ಬಿಕೊಂಡು ಅಮರಿಕೊಳುವ
ನಂಬುಗೆಗಳು, ಚಿತ್ರವಿಚಿತ್ರ ಸೆಳೆತಗಳು
ಅನಂತ ಮುಖವಾಡಗಳ ಹೊತ್ತ
ಅಹಮಿನ ಅವತಾರಗಳು
ನಾ ಮುಂದು ತಾ ಮುಂದು ಎನ್ನುವ
ನಿರಂತರ ಪೈಪೋಟಿ…

ಒಡಲ ಸೇರುತ್ತಲೇ ಜೀವ ಪಡೆವ
ಈ ವಿದೇಹಗಳಿಗೆಲ್ಲಾ
ಯಾವ ಕರಾರುಗಳಿಲ್ಲದೆ
ಜೀತ ಮಾಡುತ್ತಿರುವ
ಕಾಯವು ಅಮಾಯಕವೋ?
ಮೋಸವನರಿಯದ ಮೊದ್ದೋ?
ತೀರದಾಸೆಯ ದಾಹಿಯೋ…

ವಿಷಯಂಗಳ ಕೈ ಬದಲಾದ
ಗಳಿಗೆ-ಗಳಿಗೆಗೂ ಇದಕೆ
ಹುಟ್ಟು-ಸಾವಿನ ಚಕ್ರ
ಮತ್ತದೇ ಭವದ ರಾಟಾಳ
ತಾನಾರೆನ್ನುವ ಪ್ರಜ್ಞೆ
ಮಾಸಿ ಈ ಅಂಗಕ್ಕೆ
ಯುಗಯುಗಗಳೇ ಕಳೆದಿವೆ…

ಗುರು ಅರಿವು ಸಿಕ್ಕಾಗಲೇ
ಹರಾಜಿನ ಸದ್ದು ಅಡಗೀತು
ಸುಖ-ದುಃಖಗಳ ಬವಣೆ ತಪ್ಪೀತು
ಜನನ-ಮರಣಗಳ ಆಟ ನಿಂದೀತು
ಕಾಯಕ್ಕೆ ಬಿಡುಗಡೆ ದಕ್ಕೀತು.

Previous post ಲಿಂಗದ ಹಂಗೇ…
ಲಿಂಗದ ಹಂಗೇ…
Next post ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ

Related Posts

ಮೊಟ್ಟೆ- ಗೂಡು
Share:
Poems

ಮೊಟ್ಟೆ- ಗೂಡು

April 11, 2025 ಜ್ಯೋತಿಲಿಂಗಪ್ಪ
ಮರೆವೆಯ ಗೂಡಲಿ ಒಂದು ಮರಿ ಆಸೆಯ ಮೊಟ್ಟೆ ಗೂಡು ಸಣ್ಣದು ಮೊಟ್ಟೆ ದೊಡ್ಡದು ಮೊಟ್ಟೆ ಬಿರಿದರೆ ಗೂಡು ಸಾಯುವುದು ಗೂಡು ಸಾಯದಿರೆ ಮೊಟ್ಟೆ ಸಾಯುವುದು ಏನು ಮರೆವೆಯೋ ಸೀಸೆಯು ಒಡೆಯದೆ...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Comments 3

  1. Ramesh. M.Y
    Sep 18, 2022 Reply

    ರಾಟಾಳ ಎಂದರೆ ಚಕ್ರ ಅಥವಾ ಚರಕ ಎಂದು ಗೊತ್ತಾಯಿತು. ಕವನ ಚೆನ್ನಾಗಿದೆ.

  2. Gangadhar Mudaliar
    Sep 18, 2022 Reply

    ಭವದ ರಾಟಾಳ ಓದಿದೆ, ‘ಹರಾಜಿನ ಸದ್ದನ್ನು’ ನೀವೇ ಅಡಗಿಸಬೇಕು.

  3. ಪೆರೂರು ಜಾರು, ಉಡುಪಿ
    Sep 18, 2022 Reply

    ಹರಾಜಾದ ಗುರುಗಳು ಭವದ ರಾಟೆಯ ಭಾಗ
    ಹರಾಜು ತಡೆಯಲು ಇನ್ನೆಲ್ಲಿದೆ ಜಾಗ
    ತನ್ನರಿವು ತನ ತಲೆಗೆ ತನ್ನ ಕಯ್ಯೊಂದೆ ಈಗ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಶರಣನಾಗುವುದು…
ಶರಣನಾಗುವುದು…
February 10, 2023
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
ಇದ್ದಷ್ಟೇ…
ಇದ್ದಷ್ಟೇ…
January 10, 2021
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
Copyright © 2025 Bayalu