Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಚ್ಚು ಖೋಡಿ ಮನಸು
Share:
Poems August 6, 2022 ಕೆ.ಆರ್ ಮಂಗಳಾ

ಹುಚ್ಚು ಖೋಡಿ ಮನಸು

ಕಪ್ಪು ಕೌದಿಯ ಹೊದ್ದು
ತನ್ನ ಬಣ್ಣವನೇ ಮರೆತು
ಮಲಗಿಬಿಟ್ಟಿದೆ ನೀಲಿಯಾಗಸ
ಒಳ-ಹೊರಗು ಮಬ್ಬಾಯ್ತು…
ಕತ್ತಲೆಯ ನಂಜೇರಿ
ಕಣ್ಣು ಹರಿಸಿದುದ್ದಕ್ಕೂ
ಎಲ್ಲೆಲ್ಲೂ ಮಸುಕು
ನಿಂತಲ್ಲೇ ಯುಗಯುಗಕು ನಿಂತು
ಜೋಮುಗಟ್ಟಿತು ಕಾಲು
ನಡೆಯ ಮರೆತು…

ಮೇಘಗಳ ಆರ್ಭಟದಲಿ
ಆಗೀಗ ಸಿಡಿಯುತಿದೆ
ಮಿಂಚು-ಗುಡುಗು
ಕೊರೆವ ಚಳಿಯಲ್ಲೂ
ಬಿಟ್ಟ ನಿಟ್ಟುಸಿರ ಬಿಸಿ ಹಬೆಯು
ಸುರುಳಿಸುರುಳಿಯಾಗಿ
ಮೇಲೆ ಸರಿದು ಹೋಗುತಿದೆ…

ಎಡಬಿಡದೆ ಸುರಿಯುತಿಹ
ಮಳೆಯ ಹನಿಗಳಾ ಹಿಡಿದು
ಮುಗಿಲನೇರುವ ಕಿಚ್ಚು…
ಹಾಡುಹಗಲೇ ಕಾಣೆಯಾದ
ರವಿಯ ಹುಡುಕಿ ತರುವಾ ಹುಚ್ಚು
ಕಲ್ಪನೆಯ ಕುದುರೆಗೆ
ಎಣೆಯುಂಟೆ? ಕೊನೆವುಂಟೆ?
ನಿಜದತ್ತ ನಡೆಸುವ ಶಕ್ತಿಯುಂಟೆ?

ದೇಹ ಕಾವನು ಕಾಪಿಟ್ಟ ಜೀವಕೆ
ಎಲ್ಲಿಂದ ಬಂತಿದು
ಗಗನ ತಡಕುವ ಕನಸು!?
ನಿನ್ನೊಳಗೆ ನಿನ್ನಲ್ಲೇ
ಇಳಿದು ನೋಡೆಂದು
ತಲೆಗೆ ಮೊಟಕಿದ ಗುರು ಬೆನ್ನ ಬಳಿ ನಿಂತು

ಒಳಗಿದ್ದರೂ ಒಳಗ ನೋಡದೇ
ಹೊರಗೆ ಸುತ್ತುವ ಚಟ
ಭ್ರಮೆ ಬಿಡದ ಹಟ
ಮನಕಂಟಿ ಕಾಲಗಳೇ ಸರಿದವು…
ಗುರು ಕೊಟ್ಟ ಸುಳಿವುಗಳು
ಸಿಕ್ಕು ಕಣ್ಮರೆಯಾಗಿ ಕಾಡುತಿಹವು
ದೌರ್ಬಲ್ಯವೆನಲೇ, ಸೋಲೆನಲೆ
ಗೊಂದಲಗಳ ಬೀಡೆನಲೇ?
ಗೊತ್ತು ಗುರಿಯಿಲ್ಲದೆ ಅಲೆವ
ತುಂಡು ಮೋಡದ ತೆರದಿ
ತಳಮಳಿಸುತಿದೆ ಎದೆಯು
ಎಂದಿಗೋ ಎಂದಿಗೋ…
ನನ್ನಿರಿವಿನ ಅರಿವನರಿಯುವ ಗಳಿಗೆ
ಒದಗಿ ಬರುವುದೆಂದಿಗೋ…?

Previous post ಆಸರೆ
ಆಸರೆ
Next post ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ

Related Posts

ಅರಿವಿನ ಬಾಗಿಲು…
Share:
Poems

ಅರಿವಿನ ಬಾಗಿಲು…

October 13, 2022 ಕೆ.ಆರ್ ಮಂಗಳಾ
ಹುಚ್ಚು ಮನಸಿನ ಕುಣಿತ ದಿಕ್ಕುದಿಕ್ಕಿಗೂ ಸೆಳೆತ ಅಡಿಗಡಿಗು ಎಡತಾಕುವ ವಿಷಯಗಳ ಡೈನಮೈಟು ಕಾಲು ಎಚ್ಚರ ತಪ್ಪದಂತೆ ಜಾಣ ನಡಿಗೆಯ ಹೇಳಿಕೊಡುತಾನೆ ಹುಟ್ಟು-ಸಾವಿನ ಚಕ್ರದ ಮರ್ಮ...
ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
December 9, 2025
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
Copyright © 2025 Bayalu