Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಿಕೊಡು ಗುರುವೇ…
Share:
Poems July 4, 2022 ಕೆ.ಆರ್ ಮಂಗಳಾ

ಹುಡುಕಿಕೊಡು ಗುರುವೇ…

ದೇಹದಲ್ಲೋ ಭಾವದಲ್ಲೋ
ಎದೆಯ ಒಳಗೋ ತಲೆಯ ಒಳಗೋ
ಕಳೆದುಹೋಗಿದ್ದೇನೆ ನಾನು
ಕಳೆದುಹೋಗಿದ್ದೇನೆ…

ಕುಲದಲ್ಲೋ ಛಲದಲ್ಲೋ
ಹಠದಲ್ಲೋ ಅಹಮಿನಲ್ಲೋ
ಸೇರಿಹೋಗಿದ್ದೇನೆ ನಾನು
ಸೇರಿಹೋಗಿದ್ದೇನೆ…

ಸಂಗದಲ್ಲೋ ಸಂಸಾರದಲ್ಲೋ
ಸ್ನೇಹದಲ್ಲೋ ಪ್ರೇಮದಲ್ಲೋ
ಮುಳುಗಿಹೋಗಿದ್ದೇನೆ ನಾನು
ಮುಳುಗಿಹೋಗಿದ್ದೇನೆ…

ನೆನಪಿನಲ್ಲೋ ಕನಸಿನಲ್ಲೋ
ಮಾತಿನಲ್ಲೋ ಮೌನದಲ್ಲೋ
ಕರಗಿ ಹೋಗಿದ್ದೇನೆ ನಾನು
ಕರಗಿ ಹೋಗಿದ್ದೇನೆ…

ಬರೆಯುತಿರುವ ಅಕ್ಷರಗಳಲ್ಲೋ
ಕಲೆ ಹಾಕಿದ ಮಾಹಿತಿಯೊಳಗೋ
ಮಸುಕಾಗಿದ್ದೇನೆ
ಕಳೆದು ಹೋದ ಕಾಲದಲ್ಲೋ
ನಾಳೆ ಬರುವ ದಿನಗಳಲ್ಲೋ
ಜಾರಿಹೋಗಿದ್ದೇನೆ…

ಮತಿಗೆಟ್ಟು ಧೃತಿಗೆಟ್ಟು
ಮುಂದ ತಿಳಿಯದೇ, ಗೊತ್ತನರಿಯದೇ
ನಡೆವ ದಾರಿಯಲ್ಲಿ ದಿಕ್ಕುತಪ್ಪಿದ್ದೇನೆ
ಹುಡುಕಿಕೊಡು ಗುರುವೆ
ನನ್ನ ನನಗೆ ಹುಡುಕಿಕೊಡು.

Previous post ಮರೆತೆ…
ಮರೆತೆ…
Next post ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ

Related Posts

ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...
ಅಪ್ಪನಿಲ್ಲದ ಮನೆ
Share:
Poems

ಅಪ್ಪನಿಲ್ಲದ ಮನೆ

January 10, 2021 ಕೆ.ಆರ್ ಮಂಗಳಾ
ಅಪ್ಪನಿಲ್ಲದ ಮನೆ ಎಲ್ಲ ಇದ್ದೂ ಭಣಗುಡುತ್ತಿದೆ. ಎದೆಯ ಬೆಳಕೇ ಆರಿ ಹೋದಂತೆ ಮನದಲ್ಲಿ ಗಾಢ ಕಾರ್ಗತ್ತಲೆ ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು ಅಪ್ಪ ಮೌನ ಹೊದ್ದು...

Comments 3

  1. Manohara acharya
    Jul 5, 2022 Reply

    ನಮಸ್ತೆ ಮಂಗಳ.ಹುಡುಕಿ ಕೊಡಿ ಗುರುವೇ ಮತ್ತು ನನ್ನ ನಿನ್ನ ನಡುವೆ ಬಹಳ ಸೊಗಸಾಗಿದೆ. ಇನ್ನು ಹೆಚ್ಚು ಹೆಚ್ಚು ಹೊರಬರಲಿ ಎಂದು ಆಶಿಸುತ್ತೇನೆ.ಪ್ರೀತಿ ಇರಲಿ

  2. H V Jaya
    Jul 6, 2022 Reply

    ಕವನ ಬಹಳ ಅರ್ಥಗರ್ಭಿತವಾಗಿದೆ… ನಾನೂ ಅಜ್ಞಾನದ ಕತ್ತಲೆಯೊಳಗೆ ಕಳದುಹೋಗಿದ್ದೇನೆ. ಸುಜ್ಞಾನವನ್ನು ನೀಡಿ ಹುಡುಕಿ ಕೊಡಿ ಗುರುವೆ…

  3. ಪೆರೂರು ಜಾರು, ಉಡುಪಿ
    Jul 7, 2022 Reply

    ಕಳೆದುಕೊಂಡವರನ್ನು ಹುಡುಕಿಕೊಡುವ ಗುರುಗಳು ಇಂದೂ ಇದ್ದಾರೆಯೆ? ಪೋಲೀಸರಂತೂ ಕಳೆದುಕೊಂಡವರಿಂದ ತಮಗೇನು ಲಾಭ ಎಂದು ತಿಳಿದ ಬಳಿಕ ಹುಡುಕುತ್ತಾರೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಲಿಂಗಾಚಾರ
ಲಿಂಗಾಚಾರ
May 6, 2021
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
January 15, 2026
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
Copyright © 2026 Bayalu