Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣು ಮೆಟ್ಟಿದ ದಾರಿ
Share:
Poems October 5, 2021 ಜ್ಯೋತಿಲಿಂಗಪ್ಪ

ಮಣ್ಣು ಮೆಟ್ಟಿದ ದಾರಿ

ಈ
ಸಿಟ್ಟು ದ್ವೇಷ
ಪ್ರೇಮ ಕಾಮ ಮದ…
ಎಲ್ಲಾ ನಾನು ಹೊತ್ತು
ಹೋಗುವನೇ…

ಈ
ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ

ಇದೆಲ್ಲಾ ಮಣ್ಣಾಗುವುದು
ಇದ್ದೇ ಇದೆ
ನಾನು ಮಣ್ಣಾಗುವ ಮೊದಲು
ಮಣ್ಣಾಗವು

ಬಿಡಪ್ಪಾ
ನನ್ನ ಹೆಜ್ಜೆಯ ದಾರಿ
ನಿನ್ನ ಹೆಜ್ಜೆಯ ದಾರಿ
ಬೇರೇನೂ…

ಮಣ್ಣು ಮೆತ್ತಿದ ದಾರಿ ನನ್ನದು
ಮಣ್ಣು ಮೆಟ್ಟಿದ ದಾರಿ ನಿನ್ನದು

ನಾನು
ಯೋಚಿಸುದುದೇ ನನ್ನ
ಪ್ರಜ್ಞೆಯೇ
ಅಲ್ಲಾ
ನನ್ನ ಪ್ರಜ್ಞೆ ನನ್ನ ಯೋಚನೆಯ
ಎಚ್ಚರದಲಿರಿಸಿದೆ

ಕಣ್ಣಿನ ತಂಪು
ಕಿವಿಯ ಇಂಪು
ಎಲ್ಲಾ ಸುಕ್ಕು

ಮಾಗಿದೆ ಕಾಯ
ಇಲ್ಲೇ ಎಲ್ಲೋ ಇದೆ
ಮರೆವು

ಅರಳಿದ ಹೂವೇ
ನೀನಿರು ನಾನೋಗುವೆ.

Previous post ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
Next post ಎರಡು ಎಲ್ಲಿ?
ಎರಡು ಎಲ್ಲಿ?

Related Posts

ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...
ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...

Comments 1

  1. Padmalaya
    Oct 6, 2021 Reply

    ಬಹಳ ಚೆನ್ನಾಗಿ ಹೃದಯ ಹದವಾಗುಯತ್ತಿರುವ ಪರಿಯೊಂದನ್ನ ಈ ಕವನ ನನಗೆ ಸೂಚಿಸುತ್ತಿದೆ. ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ನ್ಯಾಯೋಚಿತವಾಗಿದೆ….

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
Copyright © 2025 Bayalu