Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ…
Share:
Poems August 8, 2021 ಜ್ಯೋತಿಲಿಂಗಪ್ಪ

ಹುಡುಕಾಟ…

ಈ
ಮರವೆ
ಯಾವಾಗ ಬರುತ್ತೋ
ಕಾಯುತಾ ಕುಳಿತಿರುವೆ

ಅಲೆದಾಡಿ ಕಾಲು ಸೋತಿವೆ
ಹುಡುಕಾಡಿ ಕಣ್ಣು ಸೋತಿವೆ

ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ
ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ

ಕೊಟ್ಟಿಗೆಯಲಿ ಕಟ್ಟಿ ಹಾಕಿರುವ
ಎತ್ತಿನ ಹೆಗಲೊಳಗೆ ಸುಕ್ಕುಸುಕ್ಕು
ಪಕ್ಕದ ಹೆಂಡದಂಗಡಿಯ ಹುಳಿ
ವಾಸನೆ ಮರೆಯದೆ ಕಟ್ಟಿದೆ

ಕಾಣುತಿದೆ
ನೀರ ಒಳಗಣ ಚಂದಿರನ ಬಿರುಕು
ಈಗಲೂ…

ಹೋದವರು ಹೋದ ದಾರಿ
ತಿರುಗಿ ಬಾರದ ದಾರಿಯಲಿ
ಕುಳಿತಿರುವೆ

ಹೆಜ್ಜೆ ಗುರುತು ಮರೆಯುವ ಮೊದಲು
ಕೊಟ್ಟಿಗೆಯಿಂದ ತಪ್ಪಿಸಿಕೊಂಡ ಹೋರಿ
ಹುಡುಕಬೇಕು ಮರೆಯದೆ.

Previous post ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
Next post ಅರಿವು-ಮರೆವಿನಾಟ
ಅರಿವು-ಮರೆವಿನಾಟ

Related Posts

ಒಂದು ತೊಟ್ಟು ಬೆಳಕು
Share:
Poems

ಒಂದು ತೊಟ್ಟು ಬೆಳಕು

February 7, 2021 ಜ್ಯೋತಿಲಿಂಗಪ್ಪ
ಈ ಕತ್ತಲು ಒಂದು ತೊಟ್ಟು ಬೆಳಕು ಕುಡಿಯಿತು ಅಮಲೇರಿದೆ ಗಾಳಿ ಪಾಲು ಮುಂದಣ ಗೆರೆ ಹಿಂದಕೂ ತಾಗಿದೆ ಪರಿಧಿಯ ಬಿಂದು ತನ್ನ ಇಚ್ಛೆಯನರಿಯದು ಸುತ್ತುವುದು ಬಯಲು ಎಂಬುದೇನು ಬಯಲು ಏನೂ...
ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...

Comments 3

  1. Kavyashree
    Aug 9, 2021 Reply

    ಹೌದು ಸರ್, ನಮ್ಮ ಪಂಚೇಂದ್ರಿಯಗಳೆಲ್ಲಾ ಅರಗಿಸಿಕೊಳ್ಳಲಾಗದ ರುಚಿಯ ಕಂಡಿವೆ- ಕವನ ಬಹಳ ಸೊಗಸಾಗಿದೆ.

  2. Shambhulingaiah
    Aug 14, 2021 Reply

    ತಿರುಗಿ ಬಾರದ ದಾರಿಯಲಿ
    ಕುಳಿತಿರುವೆ- ಮತ್ತೇ ಬಾರದ ದಾರಿಯನ್ನು ಸವೆಸುತ್ತಿದ್ದೇವೆ- ಸುಂದರ, ಅರ್ಥಗರ್ಭಿತ ಕವನ.

  3. Padmalaya
    Aug 21, 2021 Reply

    ಜೋತಿಲಿಂಗಪ್ಪನವರ ಕಾವ್ಯ ಸಂಚಿಕೆಯಲ್ಲಿ ಈ ಕವನ ನನಗೆ ಆಕರ್ಷಣೀಯವಾದದ್ದು.ಏಕೆಂದರೆ..ಅವರ ಕವನ ವಿಧಾನದಲ್ಲಿ ರೂಪಕಗಳು ಕರುಳು ಕೊಯ್ಸಿಕೊಳ್ಳುತ್ತವೆ.ಈ ಕವನದಲ್ಲಿ ತುಂಬಾ ಫಲವತ್ತಾಗಿ ರೂಪಕದ ಬೆಳೆ ತೆಗಯುತ್ತಾರೆ.”ಪಕ್ಕದ ಹೆಂಡದಂಗಡಿಯ ಹುಳಿ ವಾಸನೆ.” “ಅರಗಿಸಲಾರದ ರುಚಿ ಕಂಡಿದೆ ನಾಲಿಗೆ”…ಇಂತಹ ರೂಪಕಗಳು ಅಂತರಂಗದ ಆಳದಲ್ಲಿ ಮಡುಗಟ್ಟಿರುವ ಗಬ್ಬು ಗಲೀಜನ್ನ ಹಂಗಿಲ್ಲದೇ ಪ್ರಶ್ನಿಸುತ್ತವೆ…ಅವರ ಕಾವ್ಯ ಝರಿಗಾಗಿ ಅವರಿಗೊಂದು ಸಲಾಂ…..!!!!!!!!!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
June 12, 2025
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಅನಿಶಾ…
ಅನಿಶಾ…
September 6, 2026
ಈ  ದಾರಿ…
ಈ ದಾರಿ…
May 10, 2023
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಅಂದು-ಇಂದು
ಅಂದು-ಇಂದು
December 8, 2021
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
Copyright © 2026 Bayalu