ಹುಡುಕಾಟ
ಭವದ ಒಡಲಿಗೆ ಬಿದ್ದ ಮೇಲೆ
ಇನ್ನೆಲ್ಲಿಯ ಬಿಡುಗಡೆ
ಇಹದ ಬಾಳು
ಬಯಕೆಗಳ ಸಂಕೋಲೆ ಜಡಿದ
ಬೇಗುದಿಯ ಕಡಲು
ಈಜಬೇಕಷ್ಟೆ
ಕಾಣದ ತೀರ
ಭೂಮಿ, ಬಾನು ಒಂದಾದಂತೆ
ಕಾಣುವ ದಿಗಂತ
ಕಣ್ಣಿಗೆ ದೂರ… ದೂರ… ದೂರ…
ದೂರು ನೀಡುವುದಾದರು
ಯಾರಿಗೆ?
ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ
ಅವ ಇರದಲ್ಲೆಲೆಡೆ
ಹುಡುಕುವ ಹುಕಿಗೆ ಬೀಳುವ ಮನುಷ್ಯ
ತನ್ನೊಳಗೆ ಇಣುಕಿ ಕಾಣಬಲ್ಲನೆ,
ನೋಡಬಲ್ಲನೆ
ಹೇಳುವುದಾದರು ಯಾರಿಲ್ಲಿ?





Comments 1
ಸಿ. ಮೋಹನ್
Jan 20, 2026ಹೊರಗಣ ಅಲೆದಾಟ ವ್ಯರ್ಥ, ಒಳಗಣ ಪಯಣಕೆ ಸಜ್ಜಾಗಲಿ ಮನ🤝