Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಚ್ಚು ಖೋಡಿ ಮನಸು
Share:
Poems August 6, 2022 ಕೆ.ಆರ್ ಮಂಗಳಾ

ಹುಚ್ಚು ಖೋಡಿ ಮನಸು

ಕಪ್ಪು ಕೌದಿಯ ಹೊದ್ದು
ತನ್ನ ಬಣ್ಣವನೇ ಮರೆತು
ಮಲಗಿಬಿಟ್ಟಿದೆ ನೀಲಿಯಾಗಸ
ಒಳ-ಹೊರಗು ಮಬ್ಬಾಯ್ತು…
ಕತ್ತಲೆಯ ನಂಜೇರಿ
ಕಣ್ಣು ಹರಿಸಿದುದ್ದಕ್ಕೂ
ಎಲ್ಲೆಲ್ಲೂ ಮಸುಕು
ನಿಂತಲ್ಲೇ ಯುಗಯುಗಕು ನಿಂತು
ಜೋಮುಗಟ್ಟಿತು ಕಾಲು
ನಡೆಯ ಮರೆತು…

ಮೇಘಗಳ ಆರ್ಭಟದಲಿ
ಆಗೀಗ ಸಿಡಿಯುತಿದೆ
ಮಿಂಚು-ಗುಡುಗು
ಕೊರೆವ ಚಳಿಯಲ್ಲೂ
ಬಿಟ್ಟ ನಿಟ್ಟುಸಿರ ಬಿಸಿ ಹಬೆಯು
ಸುರುಳಿಸುರುಳಿಯಾಗಿ
ಮೇಲೆ ಸರಿದು ಹೋಗುತಿದೆ…

ಎಡಬಿಡದೆ ಸುರಿಯುತಿಹ
ಮಳೆಯ ಹನಿಗಳಾ ಹಿಡಿದು
ಮುಗಿಲನೇರುವ ಕಿಚ್ಚು…
ಹಾಡುಹಗಲೇ ಕಾಣೆಯಾದ
ರವಿಯ ಹುಡುಕಿ ತರುವಾ ಹುಚ್ಚು
ಕಲ್ಪನೆಯ ಕುದುರೆಗೆ
ಎಣೆಯುಂಟೆ? ಕೊನೆವುಂಟೆ?
ನಿಜದತ್ತ ನಡೆಸುವ ಶಕ್ತಿಯುಂಟೆ?

ದೇಹ ಕಾವನು ಕಾಪಿಟ್ಟ ಜೀವಕೆ
ಎಲ್ಲಿಂದ ಬಂತಿದು
ಗಗನ ತಡಕುವ ಕನಸು!?
ನಿನ್ನೊಳಗೆ ನಿನ್ನಲ್ಲೇ
ಇಳಿದು ನೋಡೆಂದು
ತಲೆಗೆ ಮೊಟಕಿದ ಗುರು ಬೆನ್ನ ಬಳಿ ನಿಂತು

ಒಳಗಿದ್ದರೂ ಒಳಗ ನೋಡದೇ
ಹೊರಗೆ ಸುತ್ತುವ ಚಟ
ಭ್ರಮೆ ಬಿಡದ ಹಟ
ಮನಕಂಟಿ ಕಾಲಗಳೇ ಸರಿದವು…
ಗುರು ಕೊಟ್ಟ ಸುಳಿವುಗಳು
ಸಿಕ್ಕು ಕಣ್ಮರೆಯಾಗಿ ಕಾಡುತಿಹವು
ದೌರ್ಬಲ್ಯವೆನಲೇ, ಸೋಲೆನಲೆ
ಗೊಂದಲಗಳ ಬೀಡೆನಲೇ?
ಗೊತ್ತು ಗುರಿಯಿಲ್ಲದೆ ಅಲೆವ
ತುಂಡು ಮೋಡದ ತೆರದಿ
ತಳಮಳಿಸುತಿದೆ ಎದೆಯು
ಎಂದಿಗೋ ಎಂದಿಗೋ…
ನನ್ನಿರಿವಿನ ಅರಿವನರಿಯುವ ಗಳಿಗೆ
ಒದಗಿ ಬರುವುದೆಂದಿಗೋ…?

Previous post ಆಸರೆ
ಆಸರೆ
Next post ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ

Related Posts

ಲಿಂಗದ ಹಂಗೇ…
Share:
Poems

ಲಿಂಗದ ಹಂಗೇ…

September 10, 2022 ಜ್ಯೋತಿಲಿಂಗಪ್ಪ
ಹೊದಿಯೋಕೊಂದು ಆಕಾಶ ಮಲಗೋಕೊಂದು ನೆಲ ಕುಡಿಯೋಕೊಂದು ಸಿಂಧು ಉಣ್ಣೋಕೆ ಒಂದಿಷ್ಟು ಭಿಕ್ಷೆ ಹಾಡೋಕೊಂದು ತಂಬೂರಿ ಕೇಳೋಕೊಂದು ಕಿವಿ ಇನ್ನೇನು ಆಂ ಮರೆತೇ ಮೆರೆಯಲು ಒಂದು ಮರೆವು...
ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಶಿವನ ಕುದುರೆ…
ಶಿವನ ಕುದುರೆ…
May 1, 2019
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
Copyright © 2026 Bayalu