Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿಜ ನನಸಿನ ತಾವ…
Share:
Poems July 10, 2023 ಕೆ.ಆರ್ ಮಂಗಳಾ

ನಿಜ ನನಸಿನ ತಾವ…

ಕಣ್ಣು ಮುಚ್ಚಿದಾಗ ಬರುವ ಕನಸಿಗೂ
ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ
ಏನಿಹುದು ಅಂತರ?
ನಗು, ಅಳು, ನೋವು, ಸಂಕಟ…
ಅನುಭವದಲ್ಲಿ ಅದ್ದಿ ತೆಗೆದಂತೆ
ಎಲ್ಲ ಎದುರೆದುರೇ ನಡೆದಂತೆ!
ಹೊಯ್ದಾಟಗಳ ಹಗಲ ನನಸು,
ಕನವರಿಕೆಗಳಾ ಇರುಳ ಕನಸು

ನನಸಂತೆ ಕನಸಲೂ ಅದೇ ಅದೇ
ಒಡಲ ಹಸಿವು, ಹುಸಿಗಳು
ಚಡಪಡಿಕೆಗಳು, ಹುಡುಕಾಟಗಳು
ಅಸಹಾಯಕತೆಯ ತಡವರಿಕೆಗಳು
ಇಲ್ಲಿರುವವರೆಲ್ಲಾ ಅಲ್ಲಿ ಸಿಗುತ್ತಾರೆ
ಅಲ್ಲಿಯವರೆಲ್ಲಾ ಇಲ್ಲಿ ಕಾಣುತ್ತಾರೆ
ಸಂಬಂಧಗಳು, ವಿರೋಧಗಳು,
ದಡಗಳೆರಡರ ಮೇಲೂ ನಿತ್ಯ ಹರಿದಾಡುತ್ತವೆ

ಕನಸು-ನನಸಿನ ಮೋಡಿಯಾಟದಲಿ
ನಾಳೆಗಳು ನಿನ್ನೆಗಳಾಗುತಿವೆ
ಮಲಗಿದಾಗ ದಿನ ಮರೆಯಾಗುತ್ತದೆ
ಎಚ್ಚರಾದಾಗ ಕನಸು ಸರಿಯುತ್ತದೆ
ಯಾವುದು ದಿಟ, ಯಾವುದು ಸಟೆ?
ಅಲ್ಲಿ ತೋರಿದ್ದೋ, ಇಲ್ಲಿ ಕಂಡದ್ದೋ?

ಅರಿವಾಗಿ ಎದೆಗಿಳಿದ ಗುರು ಹೇಳಿದ-
ಎರಡೂ ಸುಳ್ಳಲ್ಲ, ನಿಜದಿರುವೂ ಅಲ್ಲಿಲ್ಲ
ವಿಷಮ ವಿಷಯಗಳ ಹಗಲಿನ ಜಾತ್ರೆ
ಸಿಗದ ಬೇಗುದಿಗಳ ಇರುಳಿನ ಸಂತೆ
ಎಚ್ಚರವಾಗದ ಅಮಲಿನ ಬದುಕಿಗೆ
ಸತ್ಯದ ನೆಲೆಯು ಕಾಣುವುದೆ?
ಕನಸೊಳಗೊಂದು ಕನಸನು ಕಟ್ಟಲು
ನಿಜ ನನಸಿನ ಮರ್ಮ ತಿಳಿಯುವುದೆ?

ನಿನ್ನ ಕದಳಿಯ ನೀ ದಾಟಲೇ ಬೇಕು
ನಿನ್ನ ತಾವಕೆ ನೀ ಸೇರಲೇ ಬೇಕು
ಜಂಗಮ ಚಲನೆಯ ಲಾಸ್ಯವನರಿಯಲು
ಅಚಲವಾಗಿ ನೀ ನಿಲ್ಲಲೇ ಬೇಕು.

Previous post ಗೇಣು ದಾರಿ
ಗೇಣು ದಾರಿ
Next post ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2

Related Posts

ನನ್ನ-ನಿನ್ನ ನಡುವೆ
Share:
Poems

ನನ್ನ-ನಿನ್ನ ನಡುವೆ

June 5, 2021 ಕೆ.ಆರ್ ಮಂಗಳಾ
ನನ್ನ-ನಿನ್ನ ನಡುವೆ ಗೋಡೆ ಎಬ್ಬಿಸಿದವರಾರು ಪರದೆ ಬಿಟ್ಟವರಾರು? ಕತ್ತಲು ತುಂಬಿದವರಾರು? ಮಂಜು ಕವಿಸಿದವರಾರು? ನಿನ್ನಿಂದ ನನ್ನ ದೂರ ಮಾಡಿದವರಾರು? ನನ್ನ-ನಿನ್ನ ನಡುವೆ ಕಂದ...
…ಬಯಲನೆ ಬಿತ್ತಿ
Share:
Poems

…ಬಯಲನೆ ಬಿತ್ತಿ

August 11, 2025 ಜ್ಯೋತಿಲಿಂಗಪ್ಪ
ಅಲ್ಲಿ ನೇತಾಡುವ ಪಟಗಳೆಲ್ಲಾ ನಿನ್ನೆಯವು ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ ಕಣ್ಣೊಳಗಣ ರೂಹು ಕಣ್ಣ ಕೊಲ್ಲದು ಕಂಗಳ ಮರೆಯ ಕತ್ತಲಿಗೆ ಕಂಗಳೇ ಪ್ರಮಾಣ ಪದದ ಅರ್ಥ...

Comments 1

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Jul 13, 2023 Reply

    ಕಣ್ಣೆಚ್ಚರದಲಿ ಕನಸ ನೋಡಬೇಕು.. ಎಂಬುದನ್ನು ಎಷ್ಟು ಸರಳವಾಗಿ ಹೇಳಿರುವಿರಿ.
    ಓದುವುದೇ ಒಂದು ಚೆಂದ .

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ನಾನು  ಬಿಂಬ
ನಾನು ಬಿಂಬ
September 13, 2025
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
Copyright © 2025 Bayalu