Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನುವಿನ ಉಪಟಳ
Share:
Poems December 13, 2024 ಕೆ.ಆರ್ ಮಂಗಳಾ

ನಾನುವಿನ ಉಪಟಳ

ಕಣ್ಣಪಾಪೆಯಲಿ ನಾನವಿತು
ಕುಳಿತಿರಲು
ಕಾಣುವ ನೋಟಗಳಿಗೆ
ಲೆಕ್ಕ ಹಾಕುವರಾರು?

ತಲೆಯೊಳಗೆ ನಾನೆಂಬುದು
ತತ್ತಿ ಇಟ್ಟಿರುವಾಗ
ಬರುವ ಯೋಚನೆಗಳನು
ಎಣಿಸಿದವರಾರು?

ಮನದ ಮೂಲೆಮೂಲೆಯಲು
ನಾನೇ ಮಲಗಿರುವಾಗ
ಜಗದ ಸೊಬಗಿಗೆ
ಜಾಗವೆಲ್ಲಿಹುದು?

ಮೌನದ ಬಲೆಯೊಳಗೂ
ಸ್ವಗತಗಳೇ ತುಂಬಿರಲು
ಖಾಲಿಯಾಗುವ ಗಳಿಗೆ
ಬರುವುದುಂಟೇನು?

ನಾಲಿಗೆಯ ತುಂಬೆಲ್ಲ
ರುಚಿಗಳೇ ಮೆತ್ತಿರಲು
ಸಹಜತೆಯ ಸವಿಯದಕೆ
ತಿಳಿದಿತೇನು?

ನೋಟ- ಕೂಟಗಳು
ಜೊತೆಯಾಗಿ ಎಳೆಯಲು
ಬಾಳ ಬಂಡಿಯು ತನ್ನ
ಗುರಿ ಸೇರುವುದೇನು?

ಕಾಗದದ ದೋಣಿಯನೇ
ನಾನೆಂದುಕೊಂಡಾಗ
ಭವದಲೆಯ ಹೊಡೆತವನು
ತಡೆಯಲಾದೀತೆ?
ತಾ ಬರಿಯ ಗಾಳಿಪಟ
ಸೂತ್ರ ಇನ್ನಾರೋ
ಎಂದುಕೊಂಡಂತೆ ಹಾರು ಹಕ್ಕಿ
ಅಹಮಿಕೆಯ ಅರಮನೆಯೇ
ನನ್ನದೆನುವಾಗ
ಇರುವಿಕೆಯ ಆಗಸಕೆ
ಹಾರಲಾದೀತೇ?

ತನ್ನದಲ್ಲದ ತನುವಿನಲಿ
ಕೋಟೆಯೊಳು ಕೋಟೆ ಕಟ್ಟಿ
ಕಾಮಿಸುತಾ ಕಲ್ಪಿಸುತಾ
ಒಡೆತನ ಸಾಧಿಸಿಹ
ಮನದ ಮುಖ ಕಳಚದೆ
ಅಹಮಿಕೆ ಕರಗದು
ಅಂತರಂಗ ಕಾಣದು
ನಾನು ಮರೆಯಾಗದು…

Previous post ನೀರು… ಬರಿ ನೀರೇ?
ನೀರು… ಬರಿ ನೀರೇ?
Next post ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…

Related Posts

ಗಾಳಿ ಬುರುಡೆ
Share:
Poems

ಗಾಳಿ ಬುರುಡೆ

June 17, 2020 ಪದ್ಮಾಲಯ ನಾಗರಾಜ್
ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು ಗಾಳಿಗೆ ತೂರ್ಹೋಗಬೇಡಾ //ನಂಬಿ// ಚಿತ್ರಾ...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 1

  1. Padmalaya
    Dec 13, 2024 Reply

    ಬಿಡಾಕಾಗದಿದ್ದರೆ ಪೂಜೆ ಮಾಡಬಹುದು…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸನಾತನ ಧರ್ಮ
ಸನಾತನ ಧರ್ಮ
October 10, 2023
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಹಾಯ್ಕುಗಳು
ಹಾಯ್ಕುಗಳು
November 10, 2022
ಹಾದಿಯ ಹಣತೆ…
ಹಾದಿಯ ಹಣತೆ…
June 12, 2025
ಶಿವನ ಕುದುರೆ…
ಶಿವನ ಕುದುರೆ…
May 1, 2019
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
Copyright © 2025 Bayalu