Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೊಳಗಣ ಮರೀಚಿಕೆ
Share:
Poems February 5, 2020 ಪದ್ಮಾಲಯ ನಾಗರಾಜ್

ನನ್ನೊಳಗಣ ಮರೀಚಿಕೆ

ಈ ಊರು
ನದಿದಡೆಯಲ್ಲಿನ
ಪ್ರವಾಹ ಭೀತಿಯ ಅಭದ್ರತೆ…

ಈ ಊರು
ಛಿದ್ರ ವಿಛಿದ್ರಗಳ ಸಂಗಮ ಬಿಂದು…

ಈ ಊರು
ಪ್ರತಿಮಾ ವಿಧಾನದ ಭಾವಸುಧೆ…

ಈ ಊರು
ವಿಷಾದ, ವ್ಯಸನಗಳ ನದೀ ಸುಳಿ…

ಈ ಊರು
ಸುಖದ ಸಂಗ್ರಹಣೆಗಳ ದಗಲ್ಬಾಜಿ…

ಈ ಊರು
ಸ್ನೇಹ ಪ್ರೀತಿಗಳ ತೂಗು ತಕ್ಕಡಿ…

ಈ ಊರು
ವಾಸ್ತವ ಅರಿಯದಾ ದರ್ಶನ…

ಈ ಊರು
ಗತ ಚರಿತೆಗಳ ಅನುಶಾಸನ…

ಈ ಊರು
ಅಗಣಿತ ಕಲೆಗಳ ಅಂಗಳ…

ಈ ಊರು
ನೀತಿಪಾಠಗಳ ತವರೂರು..

ಈ ಊರಿಗೆ
ಅವನೀತಿ ಸೃಜಿಸಲು ಶಾಲೆ ಬೇಕಿಲ್ಲ…

ಈ ಊರು
ತನಗೆ ತನ್ನದೇ ಸೃಜಿಸುತ್ತಿದೆ…

ಈ ಊರು
ತನ್ನನ್ನು ತಾನೇ ಕೊಳ್ಳೆಹೊಡೆಯುತ್ತಿದೆ…

ಈ ಊರು
ತನ್ನೊಳು ತಾನೇ ಕೊಳೆಯುತ್ತಿದೆ…

ಈ ಊರು
ಪರಂಪರಾ ರಚನೆಗಳ ಊಳಿಗ…

ಈ ಊರು
ಕೈಗೆಟುಕದಾ ಕನಸು…

ಈ ಊರು
ಎಂದಾದರೂ ಉರುಳಿ ಹೋಗುವ ಬಡಪಾಯಿ…

ಈ ಊರು
ಸದಾ ಬೆಂಬಿಡದ ಮರೀಚಿಕೆ

ಈ ಊರು
ಕಡುಖಾಲಿಯಾದ ಮಹಮೌನ…

ಈ ಊರು
ಎಂದೂ ಖಾಲಿಯಾಗದಾ ನಶ್ವರ…

ಈ ಊರು
ಯಾರೂ ಯೋಚಿಸದಾ
ಸಮೃದ್ಧ ಬಯಲವನಾ…

ಈ ಊರು
ಏನೂ ಇಲ್ಲದ ನಿರಂತರ…

ಈ ಊರು
ಏನೂ ಅಲ್ಲವೆನಲೂ
ಇಲ್ಲವಾದ ಕಡು ನಿರುತ್ತರಾ.

Previous post ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
Next post ಶರಣ- ಎಂದರೆ…
ಶರಣ- ಎಂದರೆ…

Related Posts

ಬೆಳಕಲಿ ದೀಪ
Share:
Poems

ಬೆಳಕಲಿ ದೀಪ

December 8, 2021 ಜ್ಯೋತಿಲಿಂಗಪ್ಪ
ಅಕಾಲ; ಹಗಲು ಕನಸು ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ.. ಈ ಜ್ಞಾನದ ಕೇಡು ನನಗೆ ಕಣ್ಣಲ್ಲಿ ಕತ್ತಲಿರಿಸಿದೆ ಬೆಳಕಲಿ ದೀಪ...
ಸುಳ್ಳು ಅನ್ನೋದು…
Share:
Poems

ಸುಳ್ಳು ಅನ್ನೋದು…

April 6, 2023 ಜ್ಯೋತಿಲಿಂಗಪ್ಪ
ನಾ ಭಕ್ತನಾಗದೆ ನೀ ದೇವನಾದೆಯಾ ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ ಕೂಡಿ ಕೊಂಡಾಡುವ ಭಾವ ಭಾವ ತಪ್ಪಿದ ಇಜ್ಜೋಡು ಕತ್ತಲೊಳಗೆ ಬೆತ್ತಲಾಟ ಅಂಗಣದೊಳಗಾಡುವ ಆರು ಗಿಳಿವಿಂಡು...

Comments 2

  1. ಶ್ರೀಶೈಲ, ಗದಗ
    Feb 6, 2020 Reply

    ಒಳಗಿರುವ ಮರೀಚಿಕೆ ಯಾವುದು? ಆತ್ಮವೇ? ಮನಸ್ಸೇ? ಮಾಯೆಯೆ?

  2. Lingaraj Patil
    Feb 9, 2020 Reply

    ನಾಗರಾಜ ಸರ್, ದಯವಿಟ್ಟು ನೀವು ಲೇಖನಗಳನ್ನು ಬರೆಯಿರಿ, ನಿಮ್ಮ ವಿಚಾರಗಳಲ್ಲಿ ನವ ಮಾರ್ಗದ ಸೂಚನೆಗಳಿವೆ. ಅರ್ಥೈಸಿಕೊಳ್ಳಲು ತುಸು ಬಿಗಿಯೆನಿಸಿದರೂ ನನಗೆ ಅವು ಬಹಳ ಹಿಡಿಸಿವೆ. ಬಹಳ ತಿಂಗಳಾದವು, ನೀವು ಲೇಖನ ಬರೆಯದೆ, ನನ್ನ ಕೋರಿಕೆಯನ್ನು ಮನ್ನಿಸುವಿರೆಂದು ಭಾವಿಸುತ್ತೇನೆ.
    ನನ್ನ ಬುದ್ಧ ಕವನ ಸೊಗಸಾಗಿತ್ತು. ನನ್ನ ಊರು, ನನ್ನೊಳಗಿನ ವ್ಯಾಪಾರದಂತಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
October 5, 2021
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಸುಮ್ಮನೆ ಇರು
ಸುಮ್ಮನೆ ಇರು
December 6, 2020
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
Copyright © 2025 Bayalu