Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಾರಿ ಬಿಡಿ…
Share:
Poems December 6, 2020 ಕೆ.ಆರ್ ಮಂಗಳಾ

ದಾರಿ ಬಿಡಿ…

ದಾರಿ ಬಿಡಿ ದಾರಿ ಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ

ನೆನಪುಗಳೇ ಜಗ್ಗದಿರಿ ಹಿಂದಕ್ಕೆ
ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ
ಕಳೆದ ಕಾಲಗಳಿಗೆಳೆದು
ಸಮಯ ಹಾಳುಮಾಡದಿರಿ
ಕನಸುಗಳೇ, ಬಣ್ಣಬಣ್ಣದ ಚಿತ್ರಗಳ ಬಿಡಿಸಿ
ಮಾಯಾಲೋಕಕೆ ಹೊತ್ತೊಯ್ಯದಿರಿ
ಏಳದಂತೆ ಮತ್ತೆ ನಿದ್ದೆಗೆ ದೂಡದಿರಿ
ಹಿಡಿದ ಹಾದಿಯ ಮರೆಸದಿರಿ

ದಾರಿ ಬಿಡಿ ದಾರಿ ಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ

ಅಡಿಗಡಿಗೆ ಎಡತಾಕುವ ಕಿರಿಕಿರಿಗಳೇ
ಈ ದಾರಿಯಲಿ ಚೂಪುಗಲ್ಲಾಗದಿರಿ
ಅತ್ತಿಲಿತ್ತ ಜಗ್ಗಿ ಹೈರಾಣ ಮಾಡುತ್ತಾ
ನಡೆಯ ವೇಗ ತಗ್ಗಿಸದಿರಿ
ಅಳುಕಿನ ಮಾತುಗಳೇ,
ತಲೆಯಲೆಲ್ಲೋ ಕುಳಿತು
ನಿನ್ನಿಂದಾಗದು ಈ ಪಯಣವೆಂದು
ಧೈರ್ಯಗುಂದಿಸುತಾ
ಎದೆಯ ಕುಡಿಗೆ ನೀರೆರಚದಿರಿ
ಹೆಜ್ಜೆಗಳ ಹುರುಪ ಕಸಿಯದಿರಿ

ಮನದ ಸಂದಣಿಯಲ್ಲಿ ಜಾಗ ಮಾಡಿಕೊಳ್ಳುತ್ತಾ
ನಡೆಯಲೇ ಬೇಕಿದೆ ನನ್ನ ತವರಿಗೆ
ಕೈಮುಗಿದು ಕೇಳುವೆನು
ಮನಸಿನಾಟಗಳೇ ದಾರಿಬಿಡಿ
ಸಮಯವಿಲ್ಲ ಎನ್ನ ಬಳಿ ದಾರಿಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ…

Previous post ಸುಮ್ಮನೆ ಇರು
ಸುಮ್ಮನೆ ಇರು
Next post ದಾಸೋಹ ತತ್ವ
ದಾಸೋಹ ತತ್ವ

Related Posts

ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...
ರೆಕ್ಕೆ ಬಿಚ್ಚಿ…
Share:
Poems

ರೆಕ್ಕೆ ಬಿಚ್ಚಿ…

May 8, 2024 ಕೆ.ಆರ್ ಮಂಗಳಾ
‘ವರ್ಚ್ಯುವಲ್ ವರ್ಲ್ಡ್’ ಎನುವುದು ಕಂಪ್ಯೂಟರ್ ಯುಗದ ಕೂಸಲ್ಲ ಸ್ವಾಮಿ… ಅದರದು ಅನಾದಿ ಇತಿಹಾಸ ಸರ್ವವ್ಯಾಪಿ, ಸರ್ವಶಕ್ತ ಸ್ವರೂಪಿ ಸೂರ್ಯನ ಸುತ್ತ ಭೂಮಿ ಸುತ್ತಿದರೆ ಇದರ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಶಿವನ ಕುದುರೆ…
ಶಿವನ ಕುದುರೆ…
May 1, 2019
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
WHO AM I?
WHO AM I?
June 17, 2020
ಶಾಂತಿ
ಶಾಂತಿ
April 11, 2025
Copyright © 2025 Bayalu