Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆಂಬೋ ಬೆಳಗು…
Share:
Poems February 6, 2025 ಕೆ.ಆರ್ ಮಂಗಳಾ

ಗುರುವೆಂಬೋ ಬೆಳಗು…

ಒಳಗಿರುವುದೆಲ್ಲವೂ
ಕೂಡಿಸಿಟ್ಟುಕೊಂಡದ್ದೇ
ಬುದ್ಧಿ ಬಲಿತಾಗಿನಿಂದ
ಗೊತ್ತಿದ್ದೋ… ಇಲ್ಲದೆಯೋ

ನನಗೆ ನೆನಪಿದೆ
ಕಂಡದ್ದು ಉಂಡದ್ದು
ಮುಟ್ಟಿದ್ದು ಮೂಸಿದ್ದು
ತಟ್ಟಿದ್ದು ಸೆಳೆದದ್ದು
ನಕ್ಕಿದ್ದು ನಗಿಸಿದ್ದು
ಅತ್ತದ್ದು ಅಳಿಸಿದ್ದು..
ಎಲ್ಲ ಒಳಗಿಳಿದು
ಕಡು ಕೆಂಪಗಾಗಿ
ನರನಾಡಿಗಳಿಗೆಲ್ಲ ನುಗ್ಗಿ
ಲೆಕ್ಕಕ್ಕೆ ಸಿಗದಷ್ಟು
ಕತೆಗಳನು ಹೇಳೋ
ನೆನಪಿನ ಕೋಶಗಳಾಗಿ
ಹೆಜ್ಜೆಹಜ್ಜೆಗೂ ಕುರುಹಾಗಿ
ಕೆಣಕುತಿರುವುದೆಲ್ಲವೂ
ಹಿಂದಣ ಹಂಗು…

ಇಂದಲ್ಲ ನಾಳೆ
ಮತ್ತೆ ಯಾವಾಗಲಾದರೂ
ಸಿಕ್ಕೀತು, ದಕ್ಕೀತು
ಎನುವ ಬಯಕೆಗಳೆಲ್ಲ
ಕನವರಿಕೆಗಳಾಗಿ
ನಾಳೆಗಳ ಹಳವಂಡಗಳಾಗಿ
ಅದಾಗಿದ್ದರೆ ಇದಾಗಿದ್ದರೆ
ಎನುವ ರೆಗಳ ಲೋಕವಾಗಿ
ಹಾಗಾದರೆ ಹೀಗಾದರೆ
ಎನುವ ಲೆಕ್ಕಾಚಾರಗಳಾಗಿ
ಆಸೆಗಳಾಗಿ ಮೋಹವಾಗಿ
ನಿರೀಕ್ಷೆಯ ಭಾರವಾದದ್ದೆಲ್ಲಾ
ಮುಂದಣ ಮಾಯೆ…

ಹಿಂದು-ಮುಂದುಗಳ
ಸೆಳೆತದ ಸುಳಿಯೊಳಗೆ
ಸಮಯ ಸರಿದದ್ದು ಗೊತ್ತಾಗಿ
ಎಲ್ಲೋ ಎಡವಟ್ಟಾಯ್ತಲ್ಲ
ಅಯ್ಯೋ ಸಾಕೆನಗೆಂದು
ಜೀವ ಬಸವಳಿದಾಗ…
ಪ್ರಾಣವಾಯುವಿನಂತೆ
ಉಸಿರಾದ ನನ್ನ ಗುರು
ಅರಿವಾಗಿ, ಬೆಳಕಾಗಿ
ಎಚ್ಚರದ ಗಂಟೆಯಾಗಿ
ಇರುವಿಕೆಯ ಬಯಲಾಗಿ
ಕೈಹಿಡಿದ ತಾಯಾಗಿ!

Previous post ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
Next post ಅನಿಮಿಷನ ಕಥೆ- 6
ಅನಿಮಿಷನ ಕಥೆ- 6

Related Posts

ಬಯಲಾಟ
Share:
Poems

ಬಯಲಾಟ

March 17, 2021 ಜ್ಯೋತಿಲಿಂಗಪ್ಪ
ಆ ಮನೆ ಬಿಟ್ಟು ಬಂದಿರುವೆ ಎಂಬುದು ಈಗಲೂ ಇದೆ ಆ ಮನೆ ಇದೆಯೇ ಎಂಬುದು ಈಗಲೂ ಇದೆ ನಿಜ ಸುಳ್ಳು ಎಂಬುದು ನನ್ನ ಹಿತ ಆ ಮನೆ ಸಮುದ್ರ ದಾಟಲು ಹಾರುವ ಚಿಟ್ಟೆ ಹುಡುಕುತಿರುವೆ ಇನ್ನೂ...
ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಶರಣನಾಗುವುದು…
ಶರಣನಾಗುವುದು…
February 10, 2023
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ಶಾಂತಿ
ಶಾಂತಿ
April 11, 2025
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
Copyright © 2025 Bayalu