Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಾಳಿ ಬುರುಡೆ
Share:
Poems June 17, 2020 ಪದ್ಮಾಲಯ ನಾಗರಾಜ್

ಗಾಳಿ ಬುರುಡೆ

ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ
ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ
ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು
ಗಾಳಿಗೆ ತೂರ್ಹೋಗಬೇಡಾ //ನಂಬಿ//

ಚಿತ್ರಾ ವಿಚಿತ್ರದಿಂದಲಿ ಆಟವಾಡುತ ನಲಿಯುತಿಹುದು
ಒಂದರೊಳು ಹನ್ನೊಂದು ತೂರಿಸಿ ಬಣ್ಣದೋಕುಳಿ ಬಳಿಯುತಿಹುದು //ನಂಬಿ//

ಅನುಕ್ಷಣವೂ ನಿನ್ನ ಜತೆಯಲಿ/ನೆರಳಿನಂತೆ ನಲಿಯುತಿಹುದು
ಇಲ್ಲಸಲ್ಲದ ಕನಸ ತೋರಿಸಿ/ ಮಾಯಾಜಾಲವ ಹೆಣೆಯುತಿಹುದು //ನಂಬಿ//

ನಾದದೊಳಗೆ ಬಿಂದು ಮೋಹಿಸಿ/ ಹಾದರವೊಂದಾಗುತಿಹುದು
ಸಂತೆ ಕೂಟದ ಮನೆಯೊಳಗದು/ ಸಮರಸವನು ಕೊಲ್ಲುತಿಹುದು //ನಂಬಿ//

ಚಂಚಲಾಂಗಿಯು ನಾನೇ ಎನುತಿದೆ/ ಧರ್ಮಕರ್ಮ ನನ್ನದೆನುತಿದೆ
ಅಡವಿ ಸೇರಿ ಅವಿತು ಕುಳಿತರೂ/ ನಿನ್ನನೂ ಬಿಡಲಾರೆ ಎನುತಿದೆ //ನಂಬಿ//

ಸುತ್ತಮುತ್ತಾ ಮೇಲೆ ಕೆಳಗೆ/ ಆಕಾರರಹಿತ ನಾನು ಎನುತಿದೆ
ಸ್ವರ್ಗ-ನರಕ ನನ್ನದೆನುತಾ/ ಕೇಕೆ ಹಾಕಿ ನಗುತಲಿಹುದು //ನಂಬಿ//

ಹೆಸರೇ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲ
ಕದವ ತಟ್ಟಿ/ ನಿರ್ಭಯದಿ ಬದುಕು ಸಾಗಿಸಿ
ಆಳದಾ ನಿರಾಳವಾಗು //ನಂಬಿ//

Previous post WHO AM I?
WHO AM I?
Next post ಅವಿರಳ ಅನುಭಾವಿ-4
ಅವಿರಳ ಅನುಭಾವಿ-4

Related Posts

ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...
ಮುಖ- ಮುಖವಾಡ
Share:
Poems

ಮುಖ- ಮುಖವಾಡ

February 7, 2021 ಕೆ.ಆರ್ ಮಂಗಳಾ
ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು ಕೈಯಿಂದ ತಡವಿಕೊಳ್ಳುತ್ತೇನೆ ಇದು ಮುಖವಾಡವೋ ಇಲ್ಲಾ ನನ್ನ ಮುಖವೋ? ಕನ್ನಡಿ ನೋಡುವಾಗೆಲ್ಲಾ ದಿಗಿಲಾಗುತ್ತದೆ ನಾನು ಅಂದುಕೊಂಡಿರುವಂತೆ...

Comments 3

  1. ಬಸವಲಿಂಗಪ್ಪ ಕಡೂರು
    Jun 19, 2020 Reply

    ಗಾಳಿ ಬುರುಡೆಯು ನಮ್ಮನ್ನು ತೂರಿ ರೂರಿ ಕೇಕೇ ಹಾಕುತ್ತಿದೆ. ಬದುಕಿನ ಚಿತ್ರಣ ನೀಡುತ್ತದೆ. ರಾಗ ಹಾಕಿದರೆ ಸೊಗಸಾಗಿ ಹಾಡಬಹುದು.

  2. Jayaraj Bidar
    Jun 24, 2020 Reply

    ದೇಹ ಗಾಳಿ ಬುರುಡೆ, ಮನಸ್ಸು ಗಾಳಿ ಬುರುಡೆ, ನಮ್ಮ ಬದುಕೇ ಗಾಳಿ ಬುರುಡೆ ಎನ್ನಿಸಿತು. ವಿಚಾರಕ್ಕೊಡ್ಡುವ ಕವನ, ಪದ್ಮಾಲಯ ನಾಗರಾಜ್ ಶರಣರ ಕವನ ಸಂಕಲನಗಳೇನಾದರೂ ಇದ್ದರೆ ದಯವಿಟ್ಟು ತಿಳಿಸಿ.

  3. ಮಧುಸೂದನ್
    Jun 25, 2020 Reply

    ಮಾಯಾಜಾಲವ ಹೆಣೆವ ಗಾಳಿಬುರುಡೆ ಮನದ ಮುಂದಣ ಮಾಯೆ, ಆಸೆಗಳ ಜಾಲ. ಸರಳ, ಅರ್ಥಗರ್ಭಿತ ಹಾಡು.

Leave a Reply to Jayaraj Bidar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ದಾಸೋಹ ತತ್ವ
ದಾಸೋಹ ತತ್ವ
January 10, 2021
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
Copyright © 2026 Bayalu