ಹಾಯ್ಕು
೦೧
ದೀಪ ಹಿಡಿದು
ಇರುಳು ಆ ನಕ್ಷತ್ರ
ಹುಡುಕಲುಂಟೇ…
೦೨
ಮದವೇ ಮದ್ಯ
ಮದ ಏರಿದ ಅಷ್ಟೂ
ಮತ್ತು ಏರಿತು.
೦೩
ಸಾವು ಎಂಬುದು
ಕೊಬ್ಬಿನ ಮಾತು ಅಲ್ಲಾ
ಮೆಲ್ಲ ಮಾತಾಡು.
೦೪
ಸುಡಲೇನುಂಟು
ಬಿಸಿಲೇ ಇಲ್ಲ ಸುಡು
ಬಿಸಿಲು ಮತ್ತು.
೦೫
ಕೂಗಿದಲ್ಲದೆ
ಕೂಗು ಕೇಳದೇ ಕೂಗು
ಇಲ್ಲವೇ ಯಾರೂ…
೦೬
ಈ ದಾರಿ ಹಿಡಿ
ಆ ಊರಿಗೆ ಪಯಣ
ಊರಿಲ್ಲದೂರು.
Comments 1
ದಯಾನಂದ ಜಗಳೂರು
Sep 11, 2023ಸಾವು, ನಕ್ಷತ್ರ, ಮದ್ಯ, ದಾರಿ… ಈ ಅಕ್ಷರಗಳ ಚುಂಗು ಹಿಡಿದು ಜೀವ ಸತ್ಯವನ್ನು ಕಂಡುಕೊಳ್ಳುವ ವಿನೂತನ ಪ್ರಯತ್ನ.👌🏽