Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾಯದ ಗಾಯ
Share:
Poems October 19, 2025 ಜ್ಯೋತಿಲಿಂಗಪ್ಪ

ಮಾಯದ ಗಾಯ

ಯಾವಾಗ ಮಳೆ ಬರುವುದೋ
ಕಾಯುವ ಆ ದಿನ
ಯಾವಾಗ ಮಳೆ ನಿಲ್ಲುವುದೋ
ಕಾಯುವ ಈ ದಿನ

ದಿನಾ ಕಾಯುವ ಈ ದಿನಕರ
ತೋಯಗಳಲಿ ತುಯ್ಯಲಾಟ
ಘನವ ನಾನೇನು ಬಲ್ಲೆ

ಗೂಡು ಕಟ್ಟಿದ ಹಕ್ಕಿ
ಅಂಗಣದಲಿ ಹಾರಾಟ

ಗೂಡು ಘನವೇ ಕಿರಿದಾಗದು ತತ್ತಿ
ತತ್ತಿ ಘನವೇ ಕಿರಿದಾಗದು ಪ್ರಾಣ
ಪ್ರಾಣ ಘನವೇ ಕಿರಿದಾಗದು ಹಾರುವ ಹಕ್ಕಿ

ತತ್ತಿಯೊಳಗಣ ಆ ಹಕ್ಕಿ ಪ್ರಾಣ
ಗೂಡಲ್ಲಿ ಅಡಗಿತ್ತು

ಕಾಮದ ತುಂಟಾಟ
ಮೋಹದ ಮಿಂಡಾಟ
ಕ್ರೋಧದ ಛಲದಾಟ

ಮದದ ಹಮ್ಮಿನಾಟ
ಲೋಭದ ಜೂಜಾಟ
ಮತ್ಸರದ ಹೊಗೆಯಾಟ

ಆಡಿ ಕೆಡದಿರೆ ನಿಬ್ಬೆರಗು

ಮಾಯದ ಗಾಯವ
ನೆನಹು ನೆಕ್ಕಿತ್ತು

ಕಣ್ಣೊಳಗಣ ಬಿಂಬದ ಗೊಂಬೆ
ನೀರಾಯಿತು.

Previous post ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
Next post ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…

Related Posts

ಹುಡುಕಾಟ
Share:
Poems

ಹುಡುಕಾಟ

January 15, 2026 ಜಬೀವುಲ್ಲಾ ಎಂ.ಅಸದ್
ಭವದ ಒಡಲಿಗೆ ಬಿದ್ದ ಮೇಲೆ ಇನ್ನೆಲ್ಲಿಯ ಬಿಡುಗಡೆ ಇಹದ ಬಾಳು ಬಯಕೆಗಳ ಸಂಕೋಲೆ ಜಡಿದ ಬೇಗುದಿಯ ಕಡಲು ಈಜಬೇಕಷ್ಟೆ ಕಾಣದ ತೀರ ಭೂಮಿ, ಬಾನು ಒಂದಾದಂತೆ ಕಾಣುವ ದಿಗಂತ ಕಣ್ಣಿಗೆ...
ಮಾತು ಮಾಯೆ
Share:
Poems

ಮಾತು ಮಾಯೆ

July 4, 2021 ಕೆ.ಆರ್ ಮಂಗಳಾ
ಶಬ್ದಗಳ ಅರಣ್ಯದಲಿ ಕಳೆದು ಹೋಗಿದ್ದೀ ನಾನಿನ್ನು ಮಾತನಾಡಲಾರೆ ನಿನ್ನ ನೀನೇ ಹುಡುಕಿಕೋ- ಅಂದ ಗುರು ಹೀಗೊಂದು ದಿನ ಮೌನವಾಗಿಬಿಟ್ಟ! ಸುಳ್ಳಲ್ಲ ನಿಜ, ಅವರ ಒಂದೊಂದು ನುಡಿಗಳೂ...

Comments 3

  1. ಕುಸುಮಾ ತಂಗಡಗಿ
    Oct 27, 2025 Reply

    ನೆನಪುಗಳು ಯಾವತ್ತೂ ಗಾಯವನ್ನು ಮಾಯಲು ಬಿಡುವುದಿಲ್ಲಾ😟

  2. ಸುಂದರ್ ಪೌಳಿ
    Nov 7, 2025 Reply

    ಕಣ್ಣ ಬಿಂಬ ಮನದ ಬಿಂಬ, ಬಿಂಬ ಅಳಿದರೆ ಎಲ್ಲವೂ ಶೂನ್ಯ… ಯಾವುದು ಹಿರಿದು, ಯಾವುದು ಕಿರಿದು?… ಚೆನ್ನಾಗಿದೆ ಕವನ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Nov 25, 2025 Reply

      ಓದಿಗೆ… ಸಂತಸ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಗುರುಪಥ
ಗುರುಪಥ
January 4, 2020
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
Copyright © 2026 Bayalu