ಒಳಗಣ ಮರ
ಈ
ಪದ
ಏನು ನಿಜ ಹೇಳುತ್ತಾ
ನಿಜ ಹೇಳುವುದು ಅಲ್ಲಾ
ಕಾಣುವುದು ಅಲ್ಲಾ
ಕೇಳುವುದು ಅಲ್ಲಾ
ಅನುಭಾವಿಸುವುದು
ಭಾವದಲಿ ಆನು ನಿಜವಾಗುವುದು
ಈ
ಪದ ಅರ್ಥದಲಿ ಏನಿದೆಯೋ
ಅಕ್ಷರ ಬಲ್ಲವರು ಹೇಳಿ
ಓಂ ಹ್ರೀಂ….
ಈ
ಬೀಜದ
ಒಳಗೆ ಮರ ಅಡಗಿದೆ
ತೋರುವುದು ಹೇಗೆ
ನೆಲದಲಿ ಹುದುಗಿಸಬೇಕು
ನೀರು ಎರೆಯಬೇಕು
ಮೇಲಾಗಿ ಕಾಯಬೇಕು
ಆ
ಬೀಜದ ಒಳಗಣ ಮರ
ನಗುತಿದೆ ಈಗ ತೋರಿದರೂ ಕಾಣದು
ಈ
ತೊಗಲಿಗೆ ಹೊಳಪೇ
ರುದ್ರಾಕ್ಷಿ ಕೊಬ್ಬೆಲ್ಲಾ ಒಣಗಿದೆ
ಕನಸೊಳಗೂ ಕಾಡುತ್ತಿಲ್ಲ ಆ ದೇವತೆ.
Comments 1
Malini Gowda
Mar 23, 2022ಬದುಕಿನ ಹೂರಣ ಮರೆಯಾದಾಗ ಒಳಗಣ ಮರ ಒಣಗಿರುತ್ತದೋ ಅಥವಾ ಸರಿಯಾದ ಆರೈಕೆ ಸಿಗದೆ ಬೀಜವಿದ್ದಾಗ್ಯೂ ಮರ ಬೆಳೆಯದೇ ಹೋಗುತ್ತದೋ… ಕಾವ್ಯದ ಸ್ಫುರಣಗಳು ಅನಂತ.