ಈ ದಾರಿ…
ಈ
ದಾರಿ
ಹೋಗುವುದು
ಎಲ್ಲಿಗೆ ನಾನೂ ಅರಿಯೆ
ನೀವೂ ಅರಿಯೆರಿ
ಅರಿದವನಂತೆ ನಾನು ಹೋಗುತಿರಲು
ಅರಿಯದವರಂತೆ ನೀವು ಸುಮ್ಮನೇ ಇರುವಿರಿ
ಏನು ಚೆಂದ
ಅಲ್ಲಲ್ಲಿಗೆ ಅಲ್ಲಲ್ಲಿಗೆ
ದಾರಿ ಸವೆಯದು ಸರಿಯದು
ಕಣ್ಣು ಸವೆದು ಸರಿದುದು
ಈಗಷ್ಟೇ
ಕೇಳಿಸಿಕೊಂಡ ಕಿವಿ
ನೋಡಲರಿಯದು ಕಂಡ ಕಣ್ಣು
ಹೇಳಲರಿಯದು
ಕಣ್ಣು ತಪ್ಪಿ ಕಂಡುದು
ಕಿವಿ ತಪ್ಪಿ ಕೇಳಿದು
ಎರಡೂ ನಿಜ
ಎರಡೂ ಸುಳ್ಳು
ಸುಮ್ಮನೆ ಬಂದ ದಾರಿ.,
ನನ್ನ
ನಿಮ್ಮ ನಡುವೆ
ಕಂಡೂ ಕಾಣದೆ
ಕಾಣದೆ ಕಂಡ ದಾರಿ
ಸುಮ್ಮನೆ ಇದೆ
ಹೋದವರು ಬರುವ ದಾರಿ
ಕಾಯುತಿರುವೆ
ಕಾಯುವುದೇನು ಸುಮ್ಮನೆಯೇ…
Comments 2
ಪೆರೂರು ಜಾರು, ಉಡುಪಿ
May 13, 2023ಅರಿತ ದಾರಿ ಎಂದರೆ ಅಸಡ್ಡೆ ಉಪೇಕ್ಷೆ
ಅರಿಯದ ದಾರಿ ಎನಲು ಕುತೂಹಲ ಅಪೇಕ್ಷೆ
ಸರಿಯುವ ನೆಲಕುಸಿತಗಳ
ಮನಸ್ಸು ಅರಿತವರಿಲ್ಲ
Kumara Basappa
May 29, 2023ಸುಳ್ಳು ನಿಜಗಳ ಬೇಲಿ ದಾಟದೆ ದಾರಿ ಕಾಣದು.