ಈ ಕನ್ನಡಿ
ಈಗೀಗ
ಈ ಕನ್ನಡಿ ನನ್ನ
ಮುದುಕನಾಗಿ ತೋರಿಸುತ್ತಿದೆ
ಯುವಕನಾಗಿ ಕಾಣಿಸುತ್ತದೆ
ನಾನೇನು….
ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ
ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ
ಈ
ಕನ್ನಡಿ ಏನು ಸಾಮಾನ್ಯವೇ
ಕಂಡದ್ದೂ ಸುಳ್ಳು
ಕಾಣದ್ದೂ ಸುಳ್ಳು ನಿಜ
ಬಿಂಬ
ಮೌನವೇ ಸಾಕ್ಷಿ
ಕೇಳಿಸಿಕೋ ಹೇಳಲಾಗದು
ಅರಳಿದ ಹೂವು ಮೊಗ್ಗಾಗದು
ಹರಿವ ನೀರು
ಕೊನೆ ಯಾವುದೋ…
Comments 1
Raghav Dharwad
Mar 11, 2024ಬಾಲ್ಯದಿಂದ ಪ್ರತಿಯೊಂದು ಆವಸ್ಥೆಯನ್ನೂ ಇದ್ದುದನ್ನು ಇದ್ದಂತೆ ತೋರಿಸುವ ಕನ್ನಡಿಯಂತಾಗಬೇಕಿದ ನಮ್ಮ ಹೃದಯ, ನಮ್ಮ ಕಣ್ಣು, ನಮ್ಮ ಮನಸ್ಸು.