ಗುರುವಿಗೆ ನಮನ…
ನೋಟದ ನಂಜನು
ಕೂಟದ ತೊಡಕನು
ಭವದ ಹುಟ್ಟನು
ಹುಟ್ಟಿನ ಗುಟ್ಟನು
ಬಿಡಿಸಲು ಕಲಿಸಿದ ಗುರುವಿಗೆ ನಮನ
ಭಾವದ ಒಳಗನು
ವಿಷಯದ ಹುರುಳನು
ವಿದೇಹದ ಇರುವನು
ತ್ರಿಪುಟಿಯ ತಿರುಳನು
ಹುರಿಯಲು ಕಲಿಸಿದ ಗುರುವಿಗೆ ನಮನ
ಅಜ್ಞಾನದ ಕೊರಗನು
ಜ್ಞಾನದ ಹೊರೆಯನು
ಚಿತ್ತದ ಸುಳಿಯನು
ಅಹಮಿನ ಗತ್ತನು
ಇಳಿಸಲು ಕಲಿಸಿದ ಗುರುವಿಗೆ ನಮನ
ಮಾತಿನ ಬೆಳಗನು
ಮೌನದ ಘನವನು
ನಡೆ-ನುಡಿ ಸಂಗಮ
ಸಮರಸ ಸಿರಿಯನು
ಬಾಳಿಗೆ ಇಳಿಸಿದ ಗುರುವಿಗೆ ನಮನ
ಯೋಗದ ಮರ್ಮವ
ಮನಕೆ ಮುಟ್ಟಿಸಿ
ಲಿಂಗದ ಸಂಗಕೆ
ಪ್ರಾಣವ ತೋರಿಸಿ
ನಾನಾರೆಂದು ಕಾಣಲು ಕೈಗೆ
ಭಕ್ತಿಯ ಬೆಳಕಿತ್ತ ಗುರುವಿಗೆ ನಮನ.
Comments 3
ಪೆರೂರು ಜಾರು, ಉಡುಪಿ
Jan 16, 2023ನೋಟದ ನಂಜನಿಳಿಸಿದ ಮೇಲೆ
ಜ್ಞಾನದ ಹೊರೆಯನಿಳಿಸನ್ನಕ್ಕ
ಭಕ್ತಿಯ ಠಕ್ಕರ ಸಂಗ ಎಚ್ಚರವಕ್ಕ
VIJAYAKUMAR KAMMAR
Jan 16, 2023ಇದರಾಗ “ಜ್ಞಾನದ ಹೊರೆ” ಯಾಕ ಅಂತ ತಿಳಿಲಿಲ್ಲಾ. 1,3,4 ಹೊಂದೈತಿ. ಇದು ಯಾಕ ಅಂತ ಕುತೂಹಲ ಅಷ್ಟೆ.
VijayalaksHmi s
Feb 10, 2023Guruvige namana kavithe bahala sogasagide !🙏