Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದೆ ಈ ಕ್ಷಣ?
Share:
Poems October 21, 2024 ಕೆ.ಆರ್ ಮಂಗಳಾ

ಎಲ್ಲಿದೆ ಈ ಕ್ಷಣ?

ವರ್ತಮಾನದಲ್ಲಿ ನಡೆಯಲರಿಯದೆ
ನುಡಿಯಲರಿಯದೆ ಬಾಳಲರಿಯದೆ
ಕಳದೇ ಹೋಗುವ ಬದುಕು
ಕಾಣಲಾರದು ಯಾಕೆ- ‘ಈ ಕ್ಷಣ’?

ರಾಗಾಲಾಪಗಳ ಬಣ್ಣಗಳಲಿ
ಮಿಂದೇಳುತಿರುವಾಗ
ಬಯಕೆ ಬೇಗುದಿಗಳಲಿ
ಬೇಯುತಿರುವಾಗ, ಎಲ್ಲಿದೆ ಈ ಕ್ಷಣ?

ಅವರಿವರ ಸುದ್ದಿಯಲೇ
ದಿನ ಸವೆಯುತಿರುವಾಗ
ದ್ವೇಷ-ರೋಷ-ವಿಷಯಗಳ
ವಿಷ ತೊನೆಯುತಿರುವಾಗ, ತಿಳಿದೀತೆ ಈ ಕ್ಷಣ?

ಹಿಂದುಮುಂದುಗಳ ಗೊಂದಲ
ತಲೆ ತುಂಬಿಕೊಂಡಾಗ
ಆಸೆ ಆಮೋದಗಳಿಗೆ
ಹಗಲಿರುಳು ಸವೆವಾಗ, ಅರಿವಾದೀತೇ ಈ ಕ್ಷಣ?

ಸುಖ-ದುಃಖ ಸರಪಳಿಯ
ನನಗೆ ನಾನೇ ಹೊಸೆದು
ಸ್ವಹಿತದ ಸಂಬಂಧಗಳ
ಕೂಡಿ ಕಳೆಯುತಿರುವಾಗ ಸಿಕ್ಕೀತೆ ಈ ಕ್ಷಣ?

ಕಣ್ಣು ಹಾಯಿಸಿದಲೆಲ್ಲಾ
ಮನವು ಹರಿದಲೆಲ್ಲಾ
ಪೂರ್ವ ಸಂಚಿತಗಳೇ
ಬಗೆಬಗೆಯಾಗಿ ತೋರುವಾಗ, ಕಂಡೀತೆ ಈ ಕ್ಷಣ?

ಮಾತಲ್ಲೂ ಮೌನದಲೂ
ಪೂಜೆಯಲೂ, ಧ್ಯಾನದಲೂ
ಸಿಗದ ಈ ಕ್ಷಣ
ಕಣ್ಮುಂದೆ, ಕಾಲಡಿಯೇ
ಸರಿದು ಹೋಗುವ ಪರಿಗೆ
ಕಂಗಾಲಾಗಿ ಬೆಚ್ಚಿ ನಿಂತಾಗ
ಕರುಣಾಮಯಿ ಗುರು ಹೇಳಿದ-

ಈ ಕ್ಷಣಕೂ ಮುಖ್ಯ
ಇನ್ನೇನೋ ಇದೆ ಎನುವ
ಮನದ ಮೋಡಿ ಮಾತಿಗೆಲ್ಲಾ
ಕಿವಿಯಾಗಬೇಡಮ್ಮಾ
ಅಲ್ಲೇನಿದೆ…
ಬರಿ ತೆವಲುಗಳು
ಸುಖದ ಅಮಲುಗಳು
ಒಣ ಯೋಚನೆಗಳು
ನಾಳಿನ ಭಯಗಳು
ಏನೇನೋ ಆತಂಕಗಳು…
ಚಿತ್ತದಾಟದಲಿ ಮುಳುಗಿರುವುದೂ
ಗಾಢ ನಿದ್ದೆಯೇ!

ಕಂಗಳ ಕರುಳ ಕೊಯ್ಯದೆ
ಮನದ ತಿರುಳ ಹುರಿಯದೆ
ಹಿಡಿಯಲಾರೆ ನೀನದರ ಜಾಡ
ಕಾಣಲಾರೆ ಅದರ ಬೆಳಗ.
ತಿಳಿ ಮಗಳೇ-
ಈ ಕ್ಷಣವೆಂದರೆ
ಬೇರೇನೂ ಅಲ್ಲ-
ಅದೊಂದು ಬಿಡುಗಡೆ, ಮಹಾ ಎಚ್ಚರ!

Previous post ಈ ಬಳ್ಳಿ…
ಈ ಬಳ್ಳಿ…
Next post ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)

Related Posts

ನೋಟದ ಕೂಟ…
Share:
Poems

ನೋಟದ ಕೂಟ…

May 10, 2023 ಕೆ.ಆರ್ ಮಂಗಳಾ
ಕಾಣುವುದೇ ಒಂದು ನೋಟ ಹೇಳುವುದೇ ಬೇರೊಂದು ಉಸಿರ ಘಮಲಲಿ ಇಲ್ಲಾ ಹಿಡಿದ ವಾಸನೆಯ ಕುರುಹು ಕಿವಿಗೆ ಬಿದ್ದ ಶಬ್ದಕೂ ಕೇಳಿಸಿಕೊಂಡುದಕೂ ಕಾಣಲಿಲ್ಲ ಸಾಮ್ಯತೆ ನಾಲಿಗೆ ರುಚಿಸಿದ್ದಕ್ಕೂ...
ಆಗು ಕನ್ನಡಿಯಂತೆ…
Share:
Poems

ಆಗು ಕನ್ನಡಿಯಂತೆ…

September 13, 2025 ಕೆ.ಆರ್ ಮಂಗಳಾ
ಗ್ರಹಿಸು ಸಂಗ್ರಹಿಸಬೇಡ ಏನನ್ನೂ… ಕಂಡದ್ದು ಕೇಳಿದ್ದು ಮೂಸಿದ್ದು ಮುಟ್ಟಿದ್ದು ಅನುಭವಿಸಿದ್ದು ಓದಿದ್ದು ಕೂಡ… ತೂರಿಹೋಗಲಿ ಅವಿತ ವಾಸನೆಗಳೆಲ್ಲಾ ಮುಗಿಬಿದ್ದು ಬರುವ...

Comments 1

  1. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Oct 24, 2024 Reply

    ಈ ಕ್ಷಣವೆಂದರೆ ನಿಜವಾಗಿಯೂ ಮಹಾ ಎಚ್ಚರವೇ!!!
    ಎಲ್ಲಿದೆ ಈ ಕ್ಷಣ ತುಂಬ ಚೆನ್ನಾಗಿದೆ👌👌👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
Copyright © 2025 Bayalu