Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವು-ಮರೆವಿನಾಟ
Share:
Poems August 8, 2021 ಕೆ.ಆರ್ ಮಂಗಳಾ

ಅರಿವು-ಮರೆವಿನಾಟ

ನೀನರಿಯೆ ನಾನಾರೆಂದು
ನಾಮರೆತೆ ನೀನಾರೆಂದು
ನನ್ನಲ್ಲೇ ನೀನಿದ್ದರೂ
ನಿನ್ನಿಂದಲೇ ನಾ ಬದುಕಿದ್ದರೂ…
ಇದೇ ಅಲ್ಲವೇ ವಿಸ್ಮಯ?

ನಾ-ನೀನೆಂಬ ಉಭಯವೇ ಇಲ್ಲ
ಭ್ರಮೆಗೆ ಬಲಿಯಾಗದೆ
ತಿಳಿದು ನೋಡೆಂದ ಗುರು-
ನೀನೇ ನಾನೋ, ನಾನೇ ನೀನೋ…
ಮತ್ತೇ ಶುರುವಾಯ್ತು ಗೊಂದಲ.

ನೀನು ನೀನೆಂದು
ಕನವರಿಸುತಿರುವುದೆಲ್ಲ ಬುದ್ಧಿಯ ಬೇಧ
ನಾನು ನಾನು ಎಂದು
ಬಡಬಡಿಸುತಿರುವುದೆಲ್ಲ ಮನದ ಕಸ

ಈ ತಿಪ್ಪೆಯ ಮೇಲೆ ಕೂತು
ಹಿಡಿಯಬಹುದೇ ಸತ್ಯದ ಕೈಯ?
ಅಂಟಿಸಿಕೊಂಡ ರೆಕ್ಕೆಗಳ ನೆಚ್ಚಿ
ಹಾರಲಾದೀತೆ ಬಯಲಿನತ್ತ?

ಬಣ್ಣಬಣ್ಣದ ಮಾತುಗಳೆಲ್ಲ
ಮೌನದಲಿ ಕರಗಿ
ಎಲ್ಲ ಖಾಲಿಯಾಗುವ ತನಕ
ಕೇಳಲಾದೀತೆ ಎದೆಯ ಗುಟ್ಟು?

Previous post ಹುಡುಕಾಟ…
ಹುಡುಕಾಟ…
Next post ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ

Related Posts

ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...
ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...

Comments 2

  1. Jyothilingappa
    Aug 9, 2021 Reply

    ಬುದ್ಧಿಯ ಬೇಧ
    ಮನದ ಕಸ… ಆಹಾ!

  2. ಪೇರೂರು ಜಾರು, ಮಂಗಳೂರು
    Aug 14, 2021 Reply

    ಅರಿವು ಮರೆವು
    ಅರಿತೇ ಮರೆಯುವುದು
    ಅರಿಯದೇ ಮರೆಯುವುದು
    ಕೆಲವ ಕುರಿತು ಮರೆಯುವುದು
    ಬಯಲಾಗು ಮರೆಯುವುದು
    ಎಲ್ಲ ಆಟಕ್ಕೂ ಕೊನೆ ತಿಳಿ
    ಅದೇ ಅರಿವು ತಿಳಿಯದೊಡೆ
    ಬಾಳ ಮರೆವು
    ಆಟ ಮುಗಿಯಲೇ ಬೇಕು
    ಮಂಗಳ ಹಾಡಲೇ ಬೇಕು
    (ಮಂಗಳಾ ಬರೆಯಲೂ ಬೇಕು)

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಗೇಣು ದಾರಿ
ಗೇಣು ದಾರಿ
July 10, 2023
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಹಣತೆ ಸಾಕು
ಹಣತೆ ಸಾಕು
September 14, 2024
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ಇದ್ದಷ್ಟೇ…
ಇದ್ದಷ್ಟೇ…
January 10, 2021
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ನಾನರಿಯದ ಬಯಲು
ನಾನರಿಯದ ಬಯಲು
April 9, 2021
Copyright © 2025 Bayalu