Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬರಿದಾಗುವ ಬೆರಗು
Share:
Poems February 6, 2025 ಜಬೀವುಲ್ಲಾ ಎಂ.ಅಸದ್

ಬರಿದಾಗುವ ಬೆರಗು

ನಿಂತಲ್ಲೇ ಬಯಲು
ಕೊನೆಗೊಳ್ಳದು ಗೆಳೆಯ
ನಡೆಯಬೇಕು ನೀನೇ ಖುದ್ದು
ಭವದ ಬೇಲಿಗಳ ದಾಟುತ್ತ
ಸಾವಿರ ಹೆಜ್ಜೆಗಳ ಮಿಡಿದು
ಈ ಸಮಯ

ಜಗ ಹುಚ್ಚನೆಂದರೂ ಸರಿಯೇ
ಹತ್ತು ಮುಳ್ಳುಗಳ ಮಧ್ಯೆ
ಹೂವೊಂದು ಬಿರಿವಂತೆ
ನೂರು ಕಷ್ಟಗಳ ನಡುವೆ
ನಲುಗದೆ ನಗಬೇಕು ಹಾಗೆ!

ಕಣ್ ಹಾಯಿಸಿದಷ್ಟೇ
ನೆಲ, ಕಡಲು, ಆಗಸ ಎಲ್ಲಾ
ಕಣ್ಣಿನಿಂದಾಚೆಗೆ ಕಾಣಬೇಕು
ಕಂಡುಕೊಳ್ಳಬೇಕು
ಕರ ಚಾಚಬೇಕು
ಕರೆತರಬೇಕು
ಅಸಾಧ್ಯತೆಯಲ್ಲಿಯೇ
ಸಾಧ್ಯತೆ ಅವಿತಿದೆ
ಸಾಧಿಬೇಕಷ್ಟೆ ಗೆಳೆಯ

ಇರದ ದಾರಿಗಳ ಒಮ್ಮೆ ಶೋಧಿಸಿ ನೋಡು
‘ಇಲ್ಲಿ ಮೊದಲು ಏನೂ ಇರಲಿಲ್ಲ’
ಎಂದು ತಿಳಿಯುವುದು
ಸಿಕ್ಕದ್ದು ಕಳೆದು
ಎಲ್ಲವೂ ನಶ್ವರ ಎಂಬ ಸತ್ಯ ಬೆಳಗುವುದು

ಗುರಿಗೂ ಗಮ್ಯಕೂ
ಅದೇಷ್ಟು ದೂರ
ಮುಗಿಲಿಗೂ ಕಡಲಿಗೂ ಇದ್ದಷ್ಟೇ ಅಂತರ
ಅಂಗೈಗೆ ಸಿಕ್ಕಂತೆ ಸಿಕ್ಕಿ
ಮರಳ ಕಣಗಳಂತೆ ಸೋರಿ
ಬರಿದಾಗುವ ಬೆರಗು
ಈ ಬದುಕ ವೈಖರಿ.

Previous post ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
Next post ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…

Related Posts

ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...
ಕಲಿಸು ಗುರುವೆ…
Share:
Poems

ಕಲಿಸು ಗುರುವೆ…

July 10, 2025 ಕೆ.ಆರ್ ಮಂಗಳಾ
ಬಳಲಿ ಬಂದೆನು ಗುರುವೆ ನಿನ್ನ ಬಳಿಗೆ ಬಳಲಿಕೆಯ ಪರಿಹರಿಸು ಎದೆಯ ದನಿಯೆ ಇಲ್ಲಸಲ್ಲದ ಹೊರೆಯ ಹೊತ್ತು ಏಗಿದೆ ಹೆಗಲು ಜೀತದಲೆ ಜೀಕುತ್ತಾ ದಿನವ ದೂಡಿರುವೆ ನಾನು ನನ್ನದು ಎಂಬ...

Comments 2

  1. ದಿನೇಶ್ ಕೆ.ಪಿ
    Feb 18, 2025 Reply

    ಬೆರಗೇ ಬದಲಾಗುವಾಗ ಉಳಿಯೋದೇನಿದೆ…. ಬರೀ ಶೂನ್ಯ 😒

  2. ಕಾಳಿದಾಸ ಲಮಾಣಿ
    Feb 22, 2025 Reply

    ಬಣ್ಣನೆ ಬೇಕೇ ಬಯಲಿಗೆ, ಬರಿದಾಗುವ ಚೆಲುವಿಗೆ… ಆದರೂ ಜೀವನ ಶೂನ್ಯ ಮಾತ್ರ ಅಲ್ಲಾ ಅಣ್ಣಾ.

Leave a Reply to ಕಾಳಿದಾಸ ಲಮಾಣಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಶಾಂತಿ
ಶಾಂತಿ
April 11, 2025
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
Copyright © 2025 Bayalu