Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರಡು ಎಲ್ಲಿ?
Share:
Poems October 5, 2021 ಕೆ.ಆರ್ ಮಂಗಳಾ

ಎರಡು ಎಲ್ಲಿ?

ನಾನು ದ್ವೈತವೋ ಅದ್ವೈತವೋ
ಹೀಗೊಂದು ಪ್ರಶ್ನೆ ಎದ್ದದ್ದೇ ತಡ
ನಡೆದಿತ್ತು ಒಳಗೊಂದು ತಾಕಲಾಟ-

ಒಂದೆಡೆ-
ನೆನಪುಗಳಿಗೆ, ಕನಸುಗಳಿಗೆ
ಪ್ರೀತಿಯ ಕನವರಿಕೆಗಳಿಗೆ
ಎದೆಯ ಹಂಬಲಗಳಿಗೆಲ್ಲ
ನಾನೇ ಕರುಳಿನ ಸೆಲೆ
ಪೋಣಿಸುತಾ ಮಾತುಗಳ
ನಾನಿಲ್ಲದೆ ನೀನಿಲ್ಲ ಎಂದಿತು ಮನ.

ಇನ್ನೊಂದೆಡೆ-
ಪರವಸ್ತುವಿನ ಪ್ರತಿನಿಧಿ ನಾ
ಜಗತ್ಕರ್ತನ ಪ್ರತಿಬಿಂಬ
ಎಲ್ಲದರ ಸೂತ್ರಧಾರಿ
ನಾನೇ ಅಂತಿಮಸತ್ಯ
ಆತ್ಮದ ಪರ ನಡೆದಿತ್ತು
ಚಿತ್ತದ ವಕಾಲತ್ತು.

ಮನವು ಕಲ್ಪನೆಯಾಟ
ಆತ್ಮ ಜ್ಞಾನದ ನೋಟ
ಮನವು- ಆತ್ಮಗಳೆರಡೂ
ನಾನಲ್ಲ ಗುರುವೇ.
ಇಲ್ಲದ ಮನವೂ ಅಲ್ಲ
ಕಲ್ಪಿತ ಆತ್ಮನೂ ಅಲ್ಲ
ಎರಡರ ಹಂಗಳಿದಲ್ಲದೆ
ಆಳ-ನಿರಾಳವಿಲ್ಲ.

Previous post ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
Next post ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…

Related Posts

ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...
ಹೀಗೊಂದು ಸಂವಾದ…
Share:
Poems

ಹೀಗೊಂದು ಸಂವಾದ…

April 6, 2023 ಕೆ.ಆರ್ ಮಂಗಳಾ
ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು ಬಯಕೆಯ ಸೆಲೆಗೆ ಮರುಳಾಗಿಹುದು ಕಾಣುವೆನೆಂತು ಜೀವದ ಸೊಬಗ ಅರಿಯುವುದೆಂತು ಪ್ರಾಣದ ಹೊಲಬ ಗೊತ್ತಿಲ್ಲದ ನಡಿಗೆ ಕತ್ತಲ ದಾರಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಬಯಲಾಟ
ಬಯಲಾಟ
March 17, 2021
Copyright © 2025 Bayalu