Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಣತೆಯ ಹಂಗು
Share:
Poems October 19, 2025 ಕೆ.ಆರ್ ಮಂಗಳಾ

ಹಣತೆಯ ಹಂಗು

ನಾನೆಂಬ ಕತ್ತಲೆಗೆ
ನೀನೆಂಬ ಜ್ಯೋತಿ
ನಾನಿದ್ದಾಗ ನೀ
ಇರಲೇ ಬೇಕೆನುವ ತರ್ಕ
ನಾನು ಕರಗದೆ
ನೀನಾಗಲಾರೆ
ನೀನು ಸರಿಯದೇ
ಬೆಳಕ ಕಾಣಲಾರೆ…

ಕತ್ತಲೆಗಲ್ಲವೆ
ಬೆಳಕಿನ ಮೋಹ?

ಕೈಯ ಹಣತೆಯಲಿ
ಕುಣಿವ ದೀಪವ
ನೋಡುತಾ
ಗಾಳಿಗಾರದಂತೆ
ಜೋಪಾನವ ಮಾಡುತಾ
ನೆಲಮುಗಿಲ ಹಬ್ಬಿ
ಕಣ್ಣು ತುಂಬಿಕೊಳ್ಳಲಿ
ಈ ಮಹಾಬೆಳಗು

ಎದೆಯ ಹಣತೆಯಲಿ
ಬತ್ತಿಯ ತೀಡಿಹೆ
ತೈಲವನೆರೆದು
ಜ್ಯೋತಿಗೆ ಕಾದಿಹೆ
ದೀಪ ಹಚ್ಚುತಾ
ದೀಪವಾಗುವ ಕನಸು
ಇಂದು ನಿನ್ನೆಯದಲ್ಲಾ ಗುರುವೆ…

ಅಯ್ಯೋ ತರಳೆ
ಏನಿದು ಮರುಳೆ…
ಬೆಳಕಿನ ಹುಚ್ಚಿದು ತರವೇ?
ಬೆಳಗೂ ನೀನೇ
ಕತ್ತಲೂ ನೀನೇ
ಹುಡುಕುವೆ ಯಾಕೆ ಹೊರಗೆ?

ಸಾವು ಕತ್ತಲಲ್ಲಾ
ಬೆಳಕು ಬದುಕಲ್ಲಾ
ಕತ್ತಲು-ಬೆಳಕುಗಳೆರಡೂ
ವೈರಿಗಳಲ್ಲವೇ ಅಲ್ಲಾ
ಇರುಳ ಕಣ್ಣಿಗಿದೆ
ನಕ್ಷತ್ರದ ಮಿಂಚು
ಕಾಣಲಾರೆಯಾ ಮಗಳೇ?

ಬೆಳಕಿನ ಹುಚ್ಚಿಗೆ
ಕಿಚ್ಚನು ಹಚ್ಚು
ಒಳನೋಟದ ಕಣ್ಣಿಗೆ
ದೃಷ್ಟಿಯ ಹರಿಸು
ಹಣತೆಯೂ ನೀನೆ
ತೈಲವೂ ನೀನೇ
ಬತ್ತಿಯೂ ನೀನೇ ಅರಿಯೇ
ಬಯಲ ಬೆಳಕಿನ
ಕುಡಿಯೂ ನೀನೆ
ಹಣತೆಯ ಹಂಗು ಸರಿಯೇ?

Previous post ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…

Related Posts

ಮನವೇ ಮನವೇ…
Share:
Poems

ಮನವೇ ಮನವೇ…

May 6, 2020 Bayalu
ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ// ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ ವಿಲವಿಲ ಎನ್ನುತ ನಲುಗಿದೆ ನೀನು...
ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...

Comments 2

  1. Padmalaya
    Oct 23, 2025 Reply

    Waaaw… ಸೂಪರ್ ಮೆಲ್ಲಗೆ ಕಣ್ತೆರೆಯುವ ಹಂಬಲ…

  2. Panchakshari
    Nov 7, 2025 Reply

    ಸುಂದರ, ಒಳನೋಟದ ಭಾವ!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮರೆತೆ…
ಮರೆತೆ…
July 4, 2022
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
Copyright © 2025 Bayalu