Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಣತೆಯ ಹಂಗು
Share:
Poems October 19, 2025 ಕೆ.ಆರ್ ಮಂಗಳಾ

ಹಣತೆಯ ಹಂಗು

ನಾನೆಂಬ ಕತ್ತಲೆಗೆ
ನೀನೆಂಬ ಜ್ಯೋತಿ
ನಾನಿದ್ದಾಗ ನೀ
ಇರಲೇ ಬೇಕೆನುವ ತರ್ಕ
ನಾನು ಕರಗದೆ
ನೀನಾಗಲಾರೆ
ನೀನು ಸರಿಯದೇ
ಬೆಳಕ ಕಾಣಲಾರೆ…

ಕತ್ತಲೆಗಲ್ಲವೆ
ಬೆಳಕಿನ ಮೋಹ?

ಕೈಯ ಹಣತೆಯಲಿ
ಕುಣಿವ ದೀಪವ
ನೋಡುತಾ
ಗಾಳಿಗಾರದಂತೆ
ಜೋಪಾನವ ಮಾಡುತಾ
ನೆಲಮುಗಿಲ ಹಬ್ಬಿ
ಕಣ್ಣು ತುಂಬಿಕೊಳ್ಳಲಿ
ಈ ಮಹಾಬೆಳಗು

ಎದೆಯ ಹಣತೆಯಲಿ
ಬತ್ತಿಯ ತೀಡಿಹೆ
ತೈಲವನೆರೆದು
ಜ್ಯೋತಿಗೆ ಕಾದಿಹೆ
ದೀಪ ಹಚ್ಚುತಾ
ದೀಪವಾಗುವ ಕನಸು
ಇಂದು ನಿನ್ನೆಯದಲ್ಲಾ ಗುರುವೆ…

ಅಯ್ಯೋ ತರಳೆ
ಏನಿದು ಮರುಳೆ…
ಬೆಳಕಿನ ಹುಚ್ಚಿದು ತರವೇ?
ಬೆಳಗೂ ನೀನೇ
ಕತ್ತಲೂ ನೀನೇ
ಹುಡುಕುವೆ ಯಾಕೆ ಹೊರಗೆ?

ಸಾವು ಕತ್ತಲಲ್ಲಾ
ಬೆಳಕು ಬದುಕಲ್ಲಾ
ಕತ್ತಲು-ಬೆಳಕುಗಳೆರಡೂ
ವೈರಿಗಳಲ್ಲವೇ ಅಲ್ಲಾ
ಇರುಳ ಕಣ್ಣಿಗಿದೆ
ನಕ್ಷತ್ರದ ಮಿಂಚು
ಕಾಣಲಾರೆಯಾ ಮಗಳೇ?

ಬೆಳಕಿನ ಹುಚ್ಚಿಗೆ
ಕಿಚ್ಚನು ಹಚ್ಚು
ಒಳನೋಟದ ಕಣ್ಣಿಗೆ
ದೃಷ್ಟಿಯ ಹರಿಸು
ಹಣತೆಯೂ ನೀನೆ
ತೈಲವೂ ನೀನೇ
ಬತ್ತಿಯೂ ನೀನೇ ಅರಿಯೇ
ಬಯಲ ಬೆಳಕಿನ
ಕುಡಿಯೂ ನೀನೆ
ಹಣತೆಯ ಹಂಗು ಸರಿಯೇ?

Previous post ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…
Next post ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ

Related Posts

ಮಣ್ಣು ಮೆಟ್ಟಿದ ದಾರಿ
Share:
Poems

ಮಣ್ಣು ಮೆಟ್ಟಿದ ದಾರಿ

October 5, 2021 ಜ್ಯೋತಿಲಿಂಗಪ್ಪ
ಈ ಸಿಟ್ಟು ದ್ವೇಷ ಪ್ರೇಮ ಕಾಮ ಮದ… ಎಲ್ಲಾ ನಾನು ಹೊತ್ತು ಹೋಗುವನೇ… ಈ ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ ಇದೆಲ್ಲಾ ಮಣ್ಣಾಗುವುದು ಇದ್ದೇ ಇದೆ ನಾನು ಮಣ್ಣಾಗುವ...
ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...

Comments 2

  1. Padmalaya
    Oct 23, 2025 Reply

    Waaaw… ಸೂಪರ್ ಮೆಲ್ಲಗೆ ಕಣ್ತೆರೆಯುವ ಹಂಬಲ…

  2. Panchakshari
    Nov 7, 2025 Reply

    ಸುಂದರ, ಒಳನೋಟದ ಭಾವ!

Leave a Reply to Panchakshari Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ಶರಣ- ಎಂದರೆ…
ಶರಣ- ಎಂದರೆ…
March 6, 2020
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
Copyright © 2026 Bayalu