
ಮುಖ- ಮುಖವಾಡ
ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು
ಕೈಯಿಂದ ತಡವಿಕೊಳ್ಳುತ್ತೇನೆ
ಇದು ಮುಖವಾಡವೋ
ಇಲ್ಲಾ ನನ್ನ ಮುಖವೋ?
ಕನ್ನಡಿ ನೋಡುವಾಗೆಲ್ಲಾ
ದಿಗಿಲಾಗುತ್ತದೆ
ನಾನು ಅಂದುಕೊಂಡಿರುವಂತೆ
ಯಾಕಿಲ್ಲಿ ಕಾಣುತ್ತಿಲ್ಲ
ಇದು ನಾನಲ್ಲವಲ್ಲ…
ಗಲಿಬಿಲಿಯಾಗುತ್ತದೆ…
ಒಳ-ಹೊರ ಅಂತರಕಂಡು
ಕಾಲಕ್ಕೆ ಸಿಕ್ಕ ಹೊರ ನೋಟಕ್ಕೂ
ಮನಕ್ಕೆ ನಿಲುಕದ ಒಳ ರೂಪಿಗೂ
ಹೊಂದಿಕೆಯೇ ಆಗುತ್ತಿಲ್ಲವಲ್ಲ…
ಮೇಲು-ಮೇಲಕ್ಕೆ
ಪುಟಿಸುತ್ತಲೇ ಇರುವ
ಚಿತ್ತದಾಟದ ಹೊಲಬ ತಪ್ಪಿಸಿಕೊಂಡು
ಒಳಗಿಳಿಯಲು
ಪರಿತಪಿಸುತ್ತಲೇ ಇದ್ದೇನೆ
ಸಣ್ಣ ಕಿಂಡಿ ಕಂಡರೂ ಸಾಕು…
ಪರಕೀಯವೆನಿಸುತಿಹ ಮುಖವಾಡ
ಕಿತ್ತೊಗೆದು
ನಿಜ ಮುಖವ ಧರಿಸಲು.
Comments 2
ಶೋಭಾದೇವಿ, ಭಾಲ್ಕಿ
Feb 9, 2021ಪರಕೀಯವೆನಿಸುತಿಹ ಮುಖವಾಡ ಕಿತ್ತೊಗೆಯಲು… ಕವನ ಚೆನ್ನಾಗಿದೆ.
Jyothilingappa
Feb 9, 2021ಮುಖದ ಹುಡುಕಾಟ… ಸರಳ, ಸಹಜ ಕ್ರಿಯೆಗಳ ಮೂಲಕ ಗಟ್ಟಿಯಾಗಿದೆ.