
ಗೇಣು ದಾರಿ
ಮುಂದಿನ ಕಾಲು ಹಿಂದಕೆ ಬಾರದೇ
ಹಿಂದಿನ ಕಾಲು ಮುಂದಕೆ ಬಾರದೇ
ಹಿಂದು ಮುಂದು ಸಂತೆ ದಾರಿ
ತನ್ನರಿವೇ ತನ್ನ ಕುರುಹು
ತನ್ನ ಕುರುಹೇ ತನ್ನರಿವು
ಹಿಂದು ಮುಂದಾದು
ಪೂಜಿಸಿದೆ ಭಕ್ತಿ ಬಾರದೇ
ಭಕ್ತಿ ಬಾರದೇ ಪೂಜಿಸದಾದೆ
ಇದೇನು ಬೆಂಕಿಯೋ
ಒಳಗೆ ಸುಡುವುದು ಹೊರಗೆ ಉರಿಯುವುದು
ಕರುಳಿಲ್ಲ ಕಣ್ಣಿಲ್ಲ
ತಿಂದುದೆಲ್ಲವ ಹಿಂಡುವುದು
ಇರುವ ಎರಡು ಕಾಲು
ಹಿಂದು ಮುಂದಾದರೆ ನಡೆ
ಇನ್ನೇನು ಇನ್ನೇನೋ
ಒಂದೇ ಗೇಣು ಈ ದಾರಿ…
Comments 3
BasanGowda Patil
Jul 12, 2023ಗೇಣು ದಾರಿಯ ನಡಿಗೆ ಜೀವನ ಪೂರ್ತಿ ನಡೆದರೂ ಸಾಗುವುದಿಲ್ಲವಲ್ಲಾ!
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Jul 13, 2023ಹೌದಲ್ವಾ… ನಿಮ್ಮ ಓದಿಗೆ ಶರಣು.
Mahantesh Murakonda
Jul 17, 2023ಗೇಣು ದಾರಿ ಚಲಿಸಲು ಹಿನ್ನಡೆಯಬೇಕೋ, ಮುಂದಕ್ಕೆ ಚಲಿಸಬೇಕೋ… ಜಿಜ್ಞಾಸೆಗೆ ಹಚ್ಚುವ ಕವನ.