ಮೂಲತಃ ಮೊಳಕಾಲ್ಮೂರಿನವರಾದ ಜಬೀವುಲ್ಲಾ ಎಂ.ಅಸದ್ ಅವರದು ತಾತ್ವಿಕ ಚಿಂತನೆಯುಳ್ಳ ಸೃಜನಶೀಲ ವ್ಯಕ್ತಿತ್ವ. ಕಲೆ-ಸಾಹಿತ್ಯ ಅವರ ಒಡನಾಡಿಗಳು. ಬರವಣಿಗೆ- ಚಿತ್ರಕಲೆ- ಸಮಾಜ ಸೇವೆ ಅವರ ವೃತ್ತಿ. ಏಕಾಂಗಿಯ ಕನವರಿಕೆಗಳು, ಗಾಳಿಗೆ ಕಟ್ಟಿದ ಗೆಜ್ಜೆಯಂತಹ ಅಪೂರ್ವ ಕೃತಿಗಳನ್ನು ಬರೆದ ಅವರು ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ.
