Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೆಲದ ನಿಧಾನ
Share:
Poems April 29, 2018 ಕೆ.ಆರ್ ಮಂಗಳಾ

ನೆಲದ ನಿಧಾನ

ನನ್ನ ಶರಣರು ಅವರು
ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು
ಕಕ್ಕುಲತೆಯಿಂದ ಬದುಕ ಕಟ್ಟಿದವರು
ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು
ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು.

ನನ್ನ ಶರಣರು ಅವರು-
ಸತ್ಯದ ಕೂರಲಗ ಕಟ್ಟಿಕೊಂಡವರು
ಅನ್ಯಾಯ ಅಸಮತೆಗೆ ಸಿಡಿದೆದ್ದು ನಿಂತವರು
ಸ್ವರ್ಗ ನರಕಗಳನ್ನು ದೂರ ಅಟ್ಟಿದವರು
ಹೋಮ-ಹವನಗಳಿಗೆ ನೀರು ಬಿಟ್ಟವರು.

ನನ್ನ ಶರಣರು ಅವರು-
ಸಾವ ಲೆಕ್ಕಿಸದೆ ಸಾಹಿತ್ಯ ಉಳಿಸಿದವರು
ನುಡಿಯಲ್ಲಿ ನಡೆ ನಿಲಿಸಿ ನಿರಾಳರಾದವರು
ಬಯಲ ಹೊಲಬಿನಲಿ ಕರಗಿ ಹೋದವರು
ನಿತ್ಯ ಪ್ರಜ್ಞೆಯಾಗಿ ನನ್ನ ಕಾಡುವವರು.

Previous post ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
Next post ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ

Related Posts

ಬಯಲಾದ ದೇವರು
Share:
Poems

ಬಯಲಾದ ದೇವರು

January 15, 2026 ಜ್ಯೋತಿಲಿಂಗಪ್ಪ
ಈ ದೇವರು ಒಂದು ಕನಸು ನಿಜವೂ ಅಹುದು ಸುಳ್ಳೂ ಅಹುದು ಕಲ್ಪನೆಯ ಹಾಗೆ ಕಾಣುವುದು ಕಾಣದು ನಂಬಿದರೆ ಕೇಡಿಲ್ಲ ನಂಬದಿರಲೂ ಕೇಡಿಲ್ಲ ಕೇಡೆಲ್ಲವೂ ನನ್ನವು ಈ ಸುಳ್ಳಿಗೊಂದು ಕಾಣಿಸಲಾರೆ...
ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...

Comments 1

  1. padmalaya nagraj
    May 10, 2019 Reply

    exellent poem

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನ – ಚಿಂತನ
ವಚನ – ಚಿಂತನ
October 10, 2023
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ಶರಣ- ಎಂದರೆ…
ಶರಣ- ಎಂದರೆ…
March 6, 2020
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಗಣಾಚಾರ
ಗಣಾಚಾರ
August 8, 2021
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?
April 5, 2026
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
Copyright © 2026 Bayalu