Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುತ್ತೂರಿ…
Share:
Poems June 10, 2023 ಕೆ.ಆರ್ ಮಂಗಳಾ

ತುತ್ತೂರಿ…

ತುತ್ತೂರಿ ತುತ್ತೂರಿ
ಯಾಕೆ ಇಂತಹ ಪಿತೂರಿ?

ಯಾವುದೇ ಮಾತಲೂ ನಿನ್ನದೇ ರಾಗ
ಯಾವುದೇ ಭಾವಕೂ ನಿನ್ನದೇ ತಾಳ
ಬಾಯಿಬಿಟ್ಟರೂ ನಿನ್ನದೇ ಗಾನ
ಮೌನದಲಿದ್ದರೂ ನಿನ್ನದೇ ಧ್ಯಾನ
ಮಾತುಮಾತಿನಲೂ ನಿನ್ನದೇ ಹೊಳಪು
ಸ್ವಗತದ ಸರಿಗಮ ನಿನ್ನದೇ ಛಾಪು!

ತುತ್ತೂರಿ ತುತ್ತೂರಿ…

ಹಿಂದಕೆ ಹೋದರೂ ಕಾಲಿಗೆ ಸಿಗುವೆ
ಮುಂದಕೆ ಬಂದರೂ ಕಣ್ಮುಂದೇ ಇರುವೆ
ಕಡೆಗಣಿಸಿದರೂ ಕಾಯುತ ನಿಲ್ಲುವೆ
ತಳ್ಳುತಲಿದ್ದರೂ ನುಸುನುಸುಳಿ ಬರುವೆ
ಸರಿಸುತಲಿದ್ದರೂ ಹೇಗೋ ನುಗ್ಗುವೆ
ಎಲ್ಲಿದೆಯೊ ಅರಿಯೆ ನೀನಿಲ್ಲದ ತಾಣ

ತುತ್ತೂರಿ ತುತ್ತೂರಿ…

ನೆನಪಿನ ಕನವರಿಕೆಗಳೆಲ್ಲ ನೀನೇ
ನಾಳಿನ ಕನಸುಗಳೆಲ್ಲವೂ ನೀನೇ
ಭಾವಗಳುದ್ದಕೂ ಮೈಚಾಚಿರುವೆ
ತಲೆಯೊಳಗೆ ಅಡಗಿ ಕುಳಿತಿರುವೆ
ನಿನ್ನೆ-ನಾಳೆಗಳ ಜೀಕುವ ಮನದಲಿ
ನೀನಲ್ಲದೆ ಬೇರೇನಿದೆ ಅಲ್ಲಿ?

ತುತ್ತೂರಿ ತುತ್ತೂರಿ…

ಬಗೆಬಗೆಯ ರೂಪದೊಳಿರುವೆ
ಗುರುತಿಸದಂತೆ ವೇಷವ ತೊಡುವೆ
ಕೈಗೆ ಸಿಗದಂತೆ ಬಣ್ಣ ಬದಲಿಸುವೆ
ಸಮಯಕೆ ತಕ್ಕ ರಾಗ ಹಾಕುವೆ
ನೀನರಿಯದ ತಂತ್ರಗಳಿವೆಯೇ?
ನೀನರಿಯದ ಕಪಟಗಳಿವೆಯೇ?

ತುತ್ತೂರಿ ತುತ್ತೂರಿ…

ಮೈಯನಪ್ಪಿದ ಮಾಯೆಯು ನೀನು
ಬುದ್ಧಿಗೆ ಬಡಿದ ಭೂತವು ನೀನು
ಕಾಣದೆ ಅಂಟಿದ ಸೂತಕ ನೀನು
ನಾನೆ ನೀನೆಂದು ಸಾಧಿಸಿ ಗೆದ್ದೆI
ನಿನ್ನನ್ನೇ ನಾನೆಂದು ನಂಬಿದೆ
ನಿನ್ನದೆ ಗದ್ದುಗೆ ನಿನ್ನದೆ ಶಾಸನ

ತುತ್ತೂರಿ ತುತ್ತೂರಿ…

ಇಂತು
ಸ್ವಯದ ಮೇಲೆ ಸಾಗಿತ್ತು
ಪರದ ಮೆರವಣಿಗೆ
ಗುರು ಬರುವ ತನಕ ನಡೆದಿತ್ತು
ಸೆಂಗೋಲಿನ ಉರವಣಿಗೆ…

Previous post ಮೀನಿನ ಬಯಕೆ
ಮೀನಿನ ಬಯಕೆ
Next post ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…

Related Posts

ಕನ್ನಡಿ ನಂಟು
Share:
Poems

ಕನ್ನಡಿ ನಂಟು

October 10, 2023 ಜ್ಯೋತಿಲಿಂಗಪ್ಪ
ಮಾಳಿಗೆ ಮನೆ ಮನೆಯೊಳಗಣ ಕತ್ತಲಿಗೆ ಬಯಲೊಳಗೊಂದು ಕನ್ನಡಿ ಕಿಲಾಡಿ ಬೆಳಕು ಕಿಂಡಿಯಲಿ ಹರಿದು ಒಳಗು ಎಲ್ಲಾ ಬೆಳಗು ಕಟ್ಟೆಯಲಿ ಕುಳಿತು ಅಜ್ಜಾ ಮೊಮ್ಮಗನ ಈ ಕನ್ನಡೀ ಕಿಲಾ ಡೀ ಆಟಾ...
ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ಶರಣನಾಗುವುದು…
ಶರಣನಾಗುವುದು…
February 10, 2023
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಬಯಲಾಟ
ಬಯಲಾಟ
March 17, 2021
Copyright © 2025 Bayalu