Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಡೆಯ ಎಡೆ…
Share:
Poems April 5, 2026 ಕೆ.ಆರ್ ಮಂಗಳಾ

ನಡೆಯ ಎಡೆ…

ಅತ್ತಿದ್ದು ನಕ್ಕಿದ್ದು
ಒಳಗೊಳಗೇ ಬಿಕ್ಕಿದ್ದು
ಮತ್ತೆ ಜಂಜಡಕೆ ಬೀಳಲಾರೆ ಇನ್ನು
ಎಲ್ಲ ಕಲಿಸುವ ಬದುಕು
ಎಲ್ಲ ತಿಳಿಸುವ ಗುರುವು
ದಾಟಬಲ್ಲೆನು ಈಜಿ ನೂರು ಕಡಲು

ಸುಖ-ದುಃಖ ಬರಹವನು
ಬರೆವ ಕೈಗೆ ನಮಿಸಿ
ತಪ್ಪುಸರಿಗಳ ಲೆಕ್ಕ ಒಪ್ಪಿಸಿರುವೆ
ಸಂಚಯದ ಸಂಚಿಯನು
ಕೊಡವಿ ಖಾಲಿ ಮಾಡಿ
ಅಳಿದುಳಿದುದೆಲ್ಲಾ ಹುರಿದುಬಿಡುವೆ

ಹಿಂದಣದ ಹೊರೆಯಿಲ್ಲ
ಮುಂದಣದ ಹಂಗಿಲ್ಲ
ಸಮತೆಯ ಸಿರಿಯು ಕಂಗೊಳಿಸಲಿ
ಹೊಸ ಹಸಿರು ಹೊಸ ಉಸಿರು
ಹೊಸ ಕಂಪು ಹೊಸ ತಂಪು
ನಡೆಯ ಎಡೆಯಿರಲಿ ನಿತ್ಯಸತ್ಯತೆಗೆ

ಚಳಿಗಾಳಿ ಮಳೆ ಬಿಸಿಲು
ನರನರಗಳೊಳಗಿಳಿದು
ತೂಗಿ ತೊನೆದಿಹುದು ಜೀವತಾನ
ಹಗಲಿರುಳ ತೆರೆಗಳಲಿ
ಋತುಮಾಸ ಕವಲಿನಲಿ
ಹೊರಳಿ ಸಾಗಿಹುದು ಬಾಳಯಾನ

ಆ ಮುಗಿಲು ಬಿದ್ದಾಗ
ಹಸುರೆದ್ದು ಬಂದಾಗ
ಸುಂದರವು ಸೃಷ್ಟಿಯೆಲ್ಲಾ
ಅಂತರವು ಅಳಿದಾಗ
ನಾ ಕರಗಿ ಹೋದಾಗ
ಅಮೃತವು ಮರ್ತ್ಯವೆಲ್ಲಾ…

Previous post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ರೆಕ್ಕೆ ಬಿಚ್ಚಿ…
Share:
Poems

ರೆಕ್ಕೆ ಬಿಚ್ಚಿ…

May 8, 2024 ಕೆ.ಆರ್ ಮಂಗಳಾ
‘ವರ್ಚ್ಯುವಲ್ ವರ್ಲ್ಡ್’ ಎನುವುದು ಕಂಪ್ಯೂಟರ್ ಯುಗದ ಕೂಸಲ್ಲ ಸ್ವಾಮಿ… ಅದರದು ಅನಾದಿ ಇತಿಹಾಸ ಸರ್ವವ್ಯಾಪಿ, ಸರ್ವಶಕ್ತ ಸ್ವರೂಪಿ ಸೂರ್ಯನ ಸುತ್ತ ಭೂಮಿ ಸುತ್ತಿದರೆ ಇದರ...
ಗೆರೆ ಎಳೆಯದೆ…
Share:
Poems

ಗೆರೆ ಎಳೆಯದೆ…

October 13, 2022 ಜ್ಯೋತಿಲಿಂಗಪ್ಪ
ನೀನು ಕೂಗುವ ತನಕ ನನ್ನ ಕಿವಿಯಲಿ ಸದ್ದಿರಲಿಲ್ಲ ನನ್ನ ಸದ್ದಲಿ ನಿನ್ನ ಕಿವಿಯು ತೆರೆಯಲಿಲ್ಲ ನನ್ನ ನಿನ್ನ ಪ್ರತಿಷ್ಠೆ ಕಣ್ಣಲಿ ಬೆಳಕಾಗಲಿಲ್ಲ ಈ ಗಾಯಕೆ ಮುಲಾಮು ನಿನ್ನಿಂದ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನನ್ನ ಶರಣರು…
ನನ್ನ ಶರಣರು…
April 9, 2021
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
August 10, 2023
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
July 10, 2025
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
Copyright © 2026 Bayalu