
ನಿಮ್ಮಿಂದಲೇ ನಾನು
ನಾನು
ಹುಟ್ಟಿದ ಮೇಲೆ
ಹುಟ್ಟಿತು ನನ್ನ ಇತಿಹಾಸ
ನಾನು
ಸತ್ತ ಮೇಲೆ
ಹುಟ್ಟಿದ್ದು ನನ್ನ ಚರಿತ್ರೆ
ಈ
ನಡುವಿನ ಅಂತರ
ನಾನು ಇದ್ದುದ್ದು ನನ್ನ ಸುಳ್ಳು
ನಿಜ
ನಾನು
ಹೇಳಬಲ್ಲನೇ
ನನ್ನ
ಪೂರ್ವಿಗಳ
ಕತೆಯೇ ನನ್ನದು
ನಿನ್ನಿಂದಲೇ
ಹುಟ್ಟಿದ ಪುರಾಣ
ಓದು
ನನ್ನದೇನಲ್ಲ ನಿಮ್ಮದೇ
ನಿಮ್ಮಿಂದಲೇ
ಹುಟ್ಟಿದ್ದು ಈ ನಾನು.
Comments 1
Lakshman Kollur
Feb 14, 2022ನಾನು ಇದ್ದದ್ದೂ ಸುಳ್ಳೇ ಎನ್ನುವ ಕವನ ಮಾರ್ಮಿಕವಾಗಿದೆ.