ನೇರ ನುಡಿ, ದಿಟ್ಟ ವಿಚಾರವುಳ್ಳ ಪ್ರಗತಿಪರ ಚಿಂತಕರು. ಸಾಮಾಜಿಕ ಹಾಗೂ ಸಮುದಾಯಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಗಳು ಪ್ರಬಂಧಗಳನ್ನು, ಸಂಕಲನ ಗ್ರಂಥಗಳನ್ನು, ನಾಟಕಗಳನ್ನು, ವಚನಗಳನ್ನು ರಚಿಸಿದ್ದಾರೆ. ಶರಣರ ಜೀವನವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ರಂಗ ಪ್ರಯೋಗದಲ್ಲಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ.
