Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದಾಗಿ ನಿಂತೆ…
Share:
Poems April 6, 2024 ಕೆ.ಆರ್ ಮಂಗಳಾ

ಒಂದಾಗಿ ನಿಂತೆ…

ಆಗೀಗ ನೀರು ಕಾಣುವ
ಮಧುಮಾಲತಿ ಬಳ್ಳಿಯಲಿ
ತೊನೆವ ಕೆಂಪು-ಬಿಳಿ ಹೂಗಳು
ಪಕ್ಕದಲ್ಲೇ ನಸುಗಂಪಿನ
ದುಂಡು ಮಲ್ಲಿಗೆಯ ದಂಡು
ದೇಟಿನ ತುಂಬ ಬಣ್ಣಬಣ್ಣದ ದಾಸವಾಳ,
ಅರೆಬೆತ್ತಲಾದ ಸಂಪಿಗೆ ಮರದಲೂ
ಉಳಿದೆಲೆಗಳ ನಡುವೆ
ನಗುವ ಹಳದಿ ಘಮಲು,
ಎಲೆಯೊಂದಿಗೆ ಹೂಗಳನ್ನೂ
ಉದುರಿಸಿಕೊಳ್ಳುತಿರುವ ಚೆರ್ರಿ ಬ್ಲಾಸಂ
ಹಸಿರುಗಿಣಿಗಳು, ಚಿಟಗುಬ್ಬಿ, ಚಿಟ್ಟೆಗಳು
ನೀರ ಬಾನಿಯಲಿ
ರೆಕ್ಕೆ ಬಿಚ್ಚಿ ಮುಳಿಗೇಳುವ
ಕಾಗೆ, ಗುಬ್ಬಿ, ಪಾರಿವಾಳಗಳು…

ಎಲ್ಲಿಂದಲೋ ಹಾರಿ ಬಂದ
ಜೋಡಿ ಬುಲ್ಬುಲ್ ಹಕ್ಕಿಗಳು
ಇಳಿಬಿದ್ದ ಪೊದೆಯ ಮರೆಯಲಿದ್ದ
ಹಳೇ ಗೂಡ ಪತ್ತೆಹಚ್ಚಿ
ಕಡ್ಡಿ ಸೇರಿಸಿ, ಎಲೆ ಹೆಣೆದು,
ಭದ್ರಗೊಳಿಸಿ, ಒಪ್ಪವಾಗಿಸಿ
ಮೊಟ್ಟೆ ಇಟ್ಟು ಕಾವು ಕೊಡುತಿದ್ದರೆ
ಎಟುಕದ ಗೂಡಿಗೆ ಗೋಣೆತ್ತಿ
ಮಣ್ಣಿಗೆ ಮೈಯಾನಿಸಿ ಮಲಗಿದ
ತುಂಟ ಬೆಕ್ಕು…
ದೂರದಿಂದ ತೇಲಿ ಬರುತಿರುವ
ಕೋಗಿಲೆಯ ಕುಹೂ…ಕುಹೂ…

ಹೊರಗೆ ಸುರಿವ ಬಿಸಿಲು
ಒಳಗೆ ಕುದಿವ ಧಗೆ
ವಸಂತಕೆ ನುಗ್ಗಿದ
ಗ್ರೀಷ್ಮದುರಿಗೆ ಕಾದು
ಹಂಚಾಗಿರುವ ನೆಲಕೊರಗಿದ
ಹಣ್ಣೆಲೆಗಳ-ಹೂಗಳ ಹಾಸುಗೆ
ಭಾಷೆಯೇ ಬೇಕಿಲ್ಲದ
ಮಾತು ಮುಟ್ಟದ
ಅಕ್ಷರಗಳ ಹಂಗಿಲ್ಲದ
ಋತುಗಳ ಗತಿಗೆ
ಜೀವದ ಚಲನೆಗೆ
ನಡೆ ಇದೆ, ಶಬ್ದವೆಲ್ಲಿದೆ?

ನಿಸರ್ಗದ ನಡೆಯ ದನಿಗೆ
ಕಿವಿಯಾಗಿ, ಕಣ್ಣಾಗಿ…
ಒಂದಾಗಿ ನಿಂತೆ ಈ ಗಳಿಗೆ!

Previous post ಕೇಳಿಸಿತೇ?
ಕೇಳಿಸಿತೇ?
Next post ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2

Related Posts

ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...
ಈ  ದಾರಿ…
Share:
Poems

ಈ ದಾರಿ…

May 10, 2023 ಜ್ಯೋತಿಲಿಂಗಪ್ಪ
ಈ ದಾರಿ ಹೋಗುವುದು ಎಲ್ಲಿಗೆ ನಾನೂ ಅರಿಯೆ ನೀವೂ ಅರಿಯೆರಿ ಅರಿದವನಂತೆ ನಾನು ಹೋಗುತಿರಲು ಅರಿಯದವರಂತೆ ನೀವು ಸುಮ್ಮನೇ ಇರುವಿರಿ ಏನು ಚೆಂದ ಅಲ್ಲಲ್ಲಿಗೆ ಅಲ್ಲಲ್ಲಿಗೆ ದಾರಿ...

Comments 2

  1. Chinmayi
    Apr 7, 2024 Reply

    ಸರಳ, ಸುಂದರ

  2. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Apr 16, 2024 Reply

    ಯುಗಾದಿ ಸಮಯದಲ್ಲಿ ಎಲ್ಲ ಗಿಡ ಮರಗಳು ಚಿಗುರಿದಾಗ ವಿವಿಧ ಬಣ್ಣಗಳ ಬೇರೆ ಬೇರೆ ಹಲವು ಪರಿಮಳಗಳಿಂದ ತುಂಬಿದ ನಿಸರ್ಗದ ಹೊಸತನವು ‘ಒಂದಾಗಿ ನಿಂತೆ’ ಕವನದಲ್ಲಿ ತುಂಬಾ ಸೊಗಸಾಗಿ ಬಂದಿದೆ👌👌👍👍🙂

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಪಾದಕೂ ನೆಲಕೂ…
ಪಾದಕೂ ನೆಲಕೂ…
June 14, 2024
ಗುಟುಕು ಆಸೆ…
ಗುಟುಕು ಆಸೆ…
May 8, 2024
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
Copyright © 2026 Bayalu