ಸುಳ್ಳು ಅನ್ನೋದು…
ನಾ ಭಕ್ತನಾಗದೆ ನೀ ದೇವನಾದೆಯಾ
ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ
ಕೂಡಿ ಕೊಂಡಾಡುವ ಭಾವ
ಭಾವ ತಪ್ಪಿದ ಇಜ್ಜೋಡು
ಕತ್ತಲೊಳಗೆ ಬೆತ್ತಲಾಟ
ಅಂಗಣದೊಳಗಾಡುವ ಆರು ಗಿಳಿವಿಂಡು
ಒಂದ್ಹತ್ತಿ ಒಂದಿಳಿದು ಚೆಲ್ಲಾಟ
ಉಪ್ಪು ನೀರಲಿ ನೀರಾದರೆ
ನೀರು ಉಪ್ಪಾಗದೇ
ಕಣ್ಣ ಮುಚ್ಚಿದರೂ ಕಾಣುವುದು ಕಣ್ಣು
ಕಣ್ಣು ಕಂಡರೂ ಕಣ್ಣ ಮುಚ್ಚುವುದು
ನೀರಲಿಳಿದೂ ಈಸದೆ ನೀರಾಸೆ
ಒಂದೇ ರುಚಿಯ ಒಪ್ಪದು ಈ ನಾಲಿಗೆ
ಒಂದೇ ದೈವದ ಎಂಜಲು ರುಚಿಗಾಣದು
ಕಣ್ಣ ಚೆಲ್ಲುವ ಕೇಡು ಬೆರಗು.
**** **** ****
ಈ
ಸುಳ್ಳು ಸುಳ್ಳೂ
ಅನ್ನೋದು ಏನು ಗೊತ್ತೇ
ಇಲ್ಲಾ
ಕಣ್ಣೊಂದು ನೋಡಿತು ನಾನೊಂದು ನೋಡಿದೆ
ಕಿವಿಯೊಂದು ಕೇಳಿತು ನಾನೊಂದು ಕೇಳಿದೆ
ನೋಡಿದ್ದು ಕೇಳಿದ್ದು ಎರಡೂ ನಿಜ ಎರಡೂ ಸುಳ್ಳು
ಎರಡರ ನಡುವಿನ ಸಂದೇಹಿ ನಾನು
ಸುಳ್ಳಾ….
ನಿಜಾ ಹೇಳಿ ಪ್ಲೀಸ್
ಕಣ್ಣಾಸೆಗೆ ನೋಡುವುದು ಬಿಡೆ
ಕಿವಿಯಾಸೆಗೆ ಕೇಳುವುದು ಬಿಡೆ
ಬಿಟ್ಟಿ ಆಸೆ ಬಿಡದ ಬಿಡೆ
ಈ
ಸುಳ್ಳು ಅನ್ನೋದು…
Comments 3
Kumar Tumkur
Apr 10, 2023ನಾ ಭಕ್ತನಾಗದೇ ನೀ ದೇವನಾಗಲಾರೆ…. ಅರಿವಿನ ಅಳತೆ ಎಲ್ಲಿಂದ ಎಲ್ಲಿಗೆ??? ಅರ್ಥಪೂರ್ಣ ಕವನಗಳು👏👏
Rajeev Salva
Apr 10, 2023ಕಣ್ಣು ನೋಡುವುದು, ನಾನು ನೋಡುವುದು ಬೇರೆಯಾಗಿವೆ ಎಂಬ ಗ್ರಹಿಕೆಯಲ್ಲಿಯೇ ಬದುಕಿನ ಅಸಮತೋಲನೆ ಇದೆ.
Padmalaya
May 9, 2023ಸಂದೇಹ ಸುಳ್ಳ???