ಸಾವಿನ ಅರಿವೆ ಕಳಚಿ!
ತೆರೆದ ಬೆಂಕಿಯ ಕಣ್ಣಲಿ
ತಾವರೆಯ ಪ್ರತಿಬಿಂಬ
ಕತ್ತಲೆ ಬೆಳಕಿನ ನಡುವಿನ ಯುದ್ಧ
ಮುಗುಳ್ನಕ್ಕ ಬುದ್ಧ!
ಕಟ್ಟಿದ ಸೇತುವೆ ಬಳಸಿದ ಲತೆ
ಚಿಗುರಿದ ಎಲೆಎಲೆಯ ತುಂಬಾ
ಇಬ್ಬನಿಯ ಕಲರವ
ಧ್ಯಾನವಾಯಿತು ಭಂಗ!
ನೀಲಮೆಯ ಈಜಿ
ಮರಳಿದೆ ರೆಕ್ಕೆ ಸಂಕುಲ
ಕಡಲ ದಂಡೆಯಲಿ ಗೂಡು ಕಟ್ಟಿ
ಹುಟ್ಟಿತು ಸ್ಥಾವರ!
ದಿಗಂತದ ಬುಟ್ಟಿಯಲಿ
ಹಣ್ಣಾಗಿ ನೇಸರ
ನಾಳೆಗೆ ಮತ್ತೆ ಹುಟ್ಟುವನು
ಸಾವಿನ ಅರಿವೆ ಕಳಚಿ!
Comments 4
ಮಧು ಬಿ.ಎನ್.
Sep 17, 2024ಜಬೀವುಲ್ಲಾ ರವರ ‘ ಸಾವಿನ ಅರಿವೆ ಕಳಚಿ…’ ಕವಿತೆ ಇತ್ತೀಚೆಗೆ ನಾನು ಆಸ್ವಾದಿಸಿದ ಅತ್ಯುತ್ತಮ ಕವಿತೆ. ಬಳಸಿಕೊಂಡ ರೂಪಕಗಳು ಕೂಡಾ ನವನವೀನ. ಧನ್ಯವಾದಗಳು.
Zabiulla M Asad
Sep 19, 2024ಧನ್ಯವಾದಗಳು ಸರ್ 🙏
ಗಂಗಾಧರ ಜವಳೂರು
Sep 19, 2024‘ಕಡಲ ದಂಡೆಯಲಿ ಗೂಡು ಕಟ್ಟಿ
ಹುಟ್ಟಿತು ಸ್ಥಾವರ!’… ತುಂಬಾ ಚೆನ್ನಾಗಿದೆ ಸರ್.
Harsha, Raichur
Sep 22, 2024ಕತ್ತಲೆ- ಬೆಳಗಿನ ನಡುವಿನ ಯುದ್ಧದಲ್ಲಿ ಬಿದ್ದವರು ನಾವಲ್ಲವೇ? ಅದಕ್ಕೇ ಬುದ್ಧ ನಕ್ಕಿದ್ದು… ನಮ್ಮ ಮತಿಹೀನತೆಯನ್ನು ಕಂಡು…..