ಲಿಂಗದ ಹಂಗೇ…
ಹೊದಿಯೋಕೊಂದು ಆಕಾಶ
ಮಲಗೋಕೊಂದು ನೆಲ
ಕುಡಿಯೋಕೊಂದು ಸಿಂಧು
ಉಣ್ಣೋಕೆ ಒಂದಿಷ್ಟು ಭಿಕ್ಷೆ
ಹಾಡೋಕೊಂದು ತಂಬೂರಿ
ಕೇಳೋಕೊಂದು ಕಿವಿ
ಇನ್ನೇನು
ಆಂ ಮರೆತೇ
ಮೆರೆಯಲು ಒಂದು ಮರೆವು
ಅಹಂಕಾರ ಹೊತ್ತೊಯ್ಯಲು ನಾಲ್ಕು ಹೆಗಲು
ಸಾಕು
ಸೊನ್ನೆಯೊಳಗೊಂದು ಸೊನ್ನೆ ಹುಡುಕುವೆ
ಈಗ
ನನ್ನಲಿ
ಕ್ರೋಧವಿಲ್ಲ ದ್ವೇಷವಿಲ್ಲ
ಲೋಭವಿಲ್ಲ ಮತ್ಸರವಿಲ್ಲ
ಬಯಕೆಯಿಲ್ಲ ದುಃಖವಿಲ್ಲ
ಮೋಹವಿಲ್ಲ ಮದವಿಲ್ಲ
ಈ ಲಿಂಗದ ಹಂಗೇ
ನನಗೆ ನಾನೇ ಪ್ರಮಾಣ
ನನ್ನ ಲಜ್ಜೆಯ ಏನ ಹೇಳಲೀ…
Comments 2
ಪೆರೂರು ಜಾರು, ಉಡುಪಿ
Sep 18, 2022ಹಂಗಿಲ್ಲದ್ದಕ್ಕೆ ಲಂಗಿಲ್ಲ ಲಗಾಮಿಲ್ಲ.
ಲಲಿತಾ ಜವಳಿ. ವಿಜಯಪುರ
Sep 18, 2022ನನಗೆ ನಾನೇ ಪ್ರಮಾಣ- ಎನ್ನುವುದು ಒಪ್ಪತಕ್ಕ ಮಾತು. ಆದರೆ ಲಜ್ಜೆ ಯಾಕೆ?