
ನೀರು… ಬರಿ ನೀರೇ?
ಕತ್ತಲೆಂಬುದು ಕಣ್ಣ ಮುಂದೋ
ಕಣ್ಣ ಹಿಂದೋ…
ಜ್ಞಾನ ಎಂಬುದು ಅರಿವಲ್ಲ
ಅರಿದರೆ ಅಜ್ಞಾನ…
ಕತ್ತಲ ಒಳಗಣ ಬೆಳಕ
ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ
ಜ್ಞಾನವೇನು ಮರವೆಯೇ…
ನದಿ ಯಾವುದು
ನೀರು ಯಾವುದು
ದೋಣಿ ಯಾವುದು
ಹುಟ್ಟು ಯಾವುದು
ನದಿ ದಾಟಿಸಿದುದು ದೋಣಿಯೋ ಹುಟ್ಟೋ…
ನೀರ ನಡುವಿನ ದಾರಿ
ಕೂಡಿ ಹರಿಯದೇ
ನೀರು ಹರಿದರೆ ಹಳ್ಳ
ನಿಂತರೆ ಕೊಳ್ಳ
ನೀರರಿದು ನಿಂತು ಅಬ್ಧಿ..
ಹಸಿವು ಇದ್ದಲ್ಲಿ ಉಣ್ಣುವುದೇ ಸೊಗಸು.
Comments 1
ರವೀಶ್ ಜಗಲಿ
Dec 18, 2024ಜ್ಞಾನಕ್ಕೆ ಅಜ್ಞಾನದ ಜಾಗ, ಕತ್ತಲಿಗೆ ಬೆಳಕಿನ ಒಡಲು… ಕವನ ಬೇರೆಲ್ಲಿಗೋ ದಾರಿ ತೋರುವಂತಿದೆ.👌👌