ಕೇಳಿಸಿತೇ?
ಈ
ಮೂರರ ತಿರುಳ ತೆಗೆದವರಾರು
ಐದರ ಒಗಟ ಬಿಡಿಸಿದವರಾರು
ಆರರ ಬೆಡಗು ಸವಿದವರಾರು
ಎರಡರಲಿ ಒಂದಾಗುವುದು
ಒಂದರಲಿ ಹಲವಾಗುವುದು
ಒಂದೆರಡಾಗಿ ಎರಡು ನಾಲ್ಕಾಗಿ…
ಅನಂತವ ಕಂಡರೆ ಹೇಳಿ
ನಿಂದರೆ ನೀ ಕೆಡುವೆ
ಬಂದರೆ ನಾ ಕೆಡುವೆ
ಸಂತೆಗೆ ಬಂದವರ ಕೂಡೆ
ಸಮಯಾಚಾರವೇ…
ಅರಿವ ಮುನ್ನವೇ ಅರಿದೆನೆಂಬುದಿಲ್ಲ
ಅರಿದ ಮೇಲೆ ಅರಿವೆಂಬುದೇ ಇರದು
ನೆಲಕ್ಕೆ ಬಿತ್ತಿದ ಬೀಜ
ಮೊಳಕೆಯ ಸದ್ದು…
ಕೇಳಿಸಿತೇ…?
Comments 1
ಜಯರಾಜ ಸಿದ್ದಾಪುರ
Apr 12, 2024ಮೂರು, ಐದು, ಆರು, ಎರಡು, ಒಂದು… ಇವುಗಳ ಮರ್ಮ ತಿಳಿಯದೇ ಮೊಳಕೆಯ ಸದ್ದು ಹೇಗೆ ತಾನೆ ಕೇಳಿಸುತ್ತದೆ?