ಇದ್ದಷ್ಟೇ…
ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ
ಇರುವಷ್ಟು ಇರುವುದು ಇದ್ದ ಹಾಗೆ ಇರು
ಕನಸು ಇದ್ದಾಗಷ್ಟೇ ಕನಸು ಇರುವುದು
ಎಚ್ಚರಾದರೆ ಕನಸು ಕನವರಿಸುವುದು
ಎಚ್ಚರಾಗು ಉದಯದ ಮೊದಲ ಕಿರಣ ಕಣ್ಣ ತುಂಬಲಿ
ಈಗಷ್ಟೇ ಮುಂಝಾವದ ಕನಸು ಕಳೆದಿದೆ
ಕಳೆದಿರುಳಿನ ನಿರ್ಮೌನ ನಿನ್ನೆ ಕಳೆದಿದೆ
ನೆನಹುಗಳು ಒಂದೊಂದು ತೂರಿ ಬರುವದರಲಿ ತೂರಿ ಬಿಡು
ತೋರುವ ದಾರಿಯಲಿ ಕತ್ತಲೂ ಇದೆ ಬೆಳಕೂ ಇದೆ
ಮೆಟ್ಟಲುಗಳಿಲ್ಲದ ಬಾವಿ ಬಿಂಬ ಕಾಣದು
ಅಪ್ಪುವಿನಿಂದೆದ್ದ ಕೆಂಡದಲಿ ಜ್ಯೊತಿ ಇದೆ
ಬಯಲು ನುಡಿಯಲಾಗದು ಎಂದೇನಲ್ಲ
ಇದೇ ಎಂದು ನುಡಿಯಬಾರದು
ಅಳತೆ ಇಲ್ಲದೆ ಅಳೆಯುವ ಕಣ್ಣು ನನದಲ್ಲ.
Comments 1
Karthik Mannur
Jan 14, 2021ಯಾವುದು ಕನಸು, ಯಾವುದು ಎಚ್ಚರ? ಎರಡರಲ್ಲೂ ಜೀವ ಬಳಲುತ್ತದೆ! ಸುಂದರ ಕವನ.