
ಸುಮ್ಮನೆ ಇರು
ನಾನು
ನೋಡಿದ್ದೇನು ಕೇಳಿದ್ದೇನು
ಬಿಡು
ನಾನಿರುವುದೇ ಹೀಗೆ ನೋಡೆ
ಕೇಳೆ
ಕಣ್ಣ ಕೊಳೆ ಕಿವಿಯ ಕಸ
ತೊಳೆ
ಇರುವೆ ಇರುವ ಹಾಗೆ
ನಿನ್ನ
ಬೆಳಕಲಿ ನನ್ನ ನೆಳಲ ತುಂಬದಿರು
ಕೇಡು
ನನದಲ್ಲ ನಿನದು ನನಗಾವ
ಸೋಲೂ
ಗೆಲುವೂ ಇಲ್ಲ
ಆ
ಜೇಡನ
ಬಲೆಯಲಿ ಸಿಲುಕಿರುವ
ಕಪ್ಪೆ
ಕಾಲುಗಳ ಬಿಡಿಸುವ ಜೇಡ
ನೋಡು
ತನದಲ್ಲದುದ ತಾನೆಂದೂ ತಿನದು
ಅರಿವು
ತನ್ನೊಳಗಲ್ಲದೆ ಅನ್ಯದೊಳಿಲ್ಲ
ತೋರದು
ಅಡಗದು ಕಂಡೀತೇ ಮೂಗಿನ
ತುದಿ
ಸುಮ್ಮನೆ ಇರು.