Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ-ನಿನ್ನ ನಡುವೆ
Share:
Poems June 5, 2021 ಕೆ.ಆರ್ ಮಂಗಳಾ

ನನ್ನ-ನಿನ್ನ ನಡುವೆ

ನನ್ನ-ನಿನ್ನ ನಡುವೆ
ಗೋಡೆ ಎಬ್ಬಿಸಿದವರಾರು
ಪರದೆ ಬಿಟ್ಟವರಾರು?
ಕತ್ತಲು ತುಂಬಿದವರಾರು?
ಮಂಜು ಕವಿಸಿದವರಾರು?
ನಿನ್ನಿಂದ ನನ್ನ ದೂರ ಮಾಡಿದವರಾರು?

ನನ್ನ-ನಿನ್ನ ನಡುವೆ
ಕಂದ ತೋಡಿದವರಾರು
ಕೋಟೆ ಕಟ್ಟಿದವರಾರು
ಗಡಿಯ ಕೊರೆದವರಾರು
ನಿನ್ನಿರುವ ಮರೆವಂತೆ
ಮಂಪರು ಕವಿಸಿದವರಾರು?

ಅರಿವು-ಮರೆವಿನಾಟದಲಿ
ಕಳೆದು ಹೋಯಿತೆ ಕೊಂಡಿ
ಮರೆವು ಮತಿಯನು ನುಂಗಿ
ಅರಿವು ತಿಳಿವನು ನುಂಗಿ
ಅರಸುತ್ತಾ ಅಲೆಯುತ್ತಾ
ಗುರು ಬಾಗಿಲಾ ತಟ್ಟಿ
ಮೊರೆಯಿಟ್ಟಿತು ಜೀವ
ತನ್ನ ತಾ ಕಾಣಲಿಕೆ
ದಾರಿ ತೋರೆಂದು.

Previous post ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
Next post ನಾನು… ನನ್ನದು
ನಾನು… ನನ್ನದು

Related Posts

ಸುತ್ತಿ ಸುಳಿವ ಆಟ
Share:
Poems

ಸುತ್ತಿ ಸುಳಿವ ಆಟ

May 6, 2021 ಕೆ.ಆರ್ ಮಂಗಳಾ
ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ ಜೇನಿನಂಥ ಮಾತುಗಳ ನಂಬಿಬಿಟ್ಟೆ ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ ಗಿರಿಗಿಟ್ಲೆ ಆಟದಲ್ಲಿ...
ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...

Comments 1

  1. Kallappa Banave
    Jun 12, 2021 Reply

    ಕವನ ಬಹಳ ಚನ್ನಾಗಿದೆ ಅಕ್ಕಾ, ಯಾವ ಗುರುವಿನ ಕದ ತಟ್ಟಿದಿರಿ ಎಂದು ತಿಳಿಯಬಹುದೇ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಭಾರ
ಭಾರ
October 6, 2020
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಶಿವಯೋಗ
ಶಿವಯೋಗ
July 4, 2021
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
Copyright © 2023 Bayalu