
ಕ್ವಾಂಟಮ್ ಮೋಡಿ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು
ಎಣಿಸಲಾರೆ ಈ ಬಯಲ ಹೆಜ್ಜೆ
ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ
ನನ್ನೀ ನೆರಳಾಟವ ಮೆಚ್ಚಿದೆ
ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ
ಈಗ ಕ್ವಾಂಟಮ್ ಹೆಜ್ಜೆಯ ಮೋಡಿ…
ಬೆಳಕೇನು ಕಣವೋ ಅಲೆಯೋ
ಪ್ರಜ್ಞೆ ಒಳಗೊಂದು ಗುಟ್ಟು
ನಾನಿಟ್ಟ ಬೇತಾಳ ನನ್ನ ಬೆನ್ನು
ಮಣಿಯ ಮಣಿಸಿದೆ
ಕೃಷ್ಣ ರಂಧ್ರ ಒಳಗೊಂದು
ಕೃಷ್ಣ ಆಟ ಈ ಕಣ್ಣ ಮಣಿ.
Comments 1
Rekha Halappa
Nov 12, 2021ದೀಪಾವಳಿಯ ಸಂದರ್ಭದಲ್ಲಿ ಬೆಳಕನ್ನು ಅನುಸಂದಾನಿಸುವಂತಿವೆ ಎರಡೂ ಕವನಗಳು. ಆಧ್ಯಾತ್ಮದ ಉಸಿರನ್ನು ಉಸುರುವ ಕವನಗಳು ಚೇತೋಹಾರಿಯಾಗಿವೆ.