Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇದ್ದ ಅಲ್ಲಮ ಇಲ್ಲದಂತೆ
Share:
Poems April 29, 2018 ಡಾ. ಶಶಿಕಾಂತ ಪಟ್ಟಣ

ಇದ್ದ ಅಲ್ಲಮ ಇಲ್ಲದಂತೆ

ಕಲ್ಯಾಣ ಹಣತೆ ಭಕ್ತಿ ರಸ ತೈಲ
ಅನುಭವ ಅಬ್ಬರ ಚಿಂತನೆ
ಹೊರಗೆ ದುಡಿ ಮದ್ದಳೆ ಸದ್ದು
ಒಳಗೊಳಗೆ ಮಿಡಿವ ತಂತಿ.

ಕಾಣಲಾಗದ ತೋರಬಾರದ
ಮಹಾ ಘನವ ತೋರಿ
ಅರಿವು ಮರೆಯ ಜಾಣ
ಅಂಧ ಮೌಢ್ಯಕೆ ಬಾಣ.

ಜಗದ ಭೂತಲದ ಕಾಲಜ್ಞಾನ
ಶಬ್ದದೊಳಗಿನ ಮಹಾ ನಿಶಬ್ದ
ಬೀಜದೊಳಗಿನ ಉಲಿವ ಮರ
ವ್ಯೋಮ ಕಾಯದ ಬಯಲು.

ಮಂತ್ರ ಗೌಪ್ಯದ ಮುನ್ನುಡಿ
ಅನುಭೂತಿಯ ಕನ್ನಡಿ
ಅಲ್ಲಾನ ಆಗಮನ ಲಾಮಾನ ನಿರ್ಗಮನ
ಮಧ್ಯ ಅಲ್ಲಮ ನಿನ್ನ ಜನನ.

ಜ್ಞಾನದ ಚಿಜ್ಜ್ಯೋತಿ ವೈರಾಗ್ಯದ ಮೂರುತಿ
ಕಲ್ಯಾಣದ ಕೀರುತಿ.
ಚರ್ಚೆ ಗೊಷ್ಠಿ ವಾದ, ಶೂನ್ಯ ಪೀಠದ ತೇಜ
ಇದ್ದ ಅಲ್ಲಮ ಇಲ್ಲದಂತೆ…

Previous post ನೆಲದ ನಿಧಾನ
ನೆಲದ ನಿಧಾನ
Next post ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು

Related Posts

ಸಂತೆಯ ಸಂತ
Share:
Poems

ಸಂತೆಯ ಸಂತ

September 7, 2020 ಜ್ಯೋತಿಲಿಂಗಪ್ಪ
ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ ಕಣ್ಣಿಗೆ ಕರುಳು ಇರಬಾರದು ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ ಈ ಮೂರು ಮೊಳದ...
ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಗುರುಪಥ
ಗುರುಪಥ
January 4, 2020
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
WHO AM I?
WHO AM I?
June 17, 2020
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
Copyright © 2021 Bayalu